Breaking News

ದೇಶದ ಆಹಾರ ಭದ್ರತೆಗೆ 1 ಲಕ್ಷ ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ: ಪ್ರಧಾನಿ ಮೋದಿ

ನವದೆಹಲಿ: ರೈತರ ಆದಾಯ ಹೆಚ್ಚಳದೊಂದಿಗೆ, ದೇಶದ ಆಹಾರ ಭದ್ರತೆಯನ್ನು ಖಾತರಿ ಪಡಿಸಿಕೊಳ್ಳುವ 1 ಲಕ್ಷ ಕೋಟಿ ವೆಚ್ಚದ ಯೋಜನೆ, ಕಾರ್ಮಿಕ ಕಲ್ಯಾಣ ಸಂಬಂಧಿತ ಪ್ರಸ್ತಾವಗಳು, ಖಾದ್ಯ ತೈಲ ಉತ್ಪಾದನೆ ಉತ್ತೇಜಿಸುವ ಮಿಷನ್‌ ಸೇರಿದಂತೆ ಹಲವು ಪ್ರಮುಖ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಅನುಮೋದನೆ ನೀಡಿದೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಪಿಎಂ-ಆರ್‌ಜೆವಿವೈ) ಹಾಗೂ ಕೃಷಿ ಯೋನ್ನತಿ ಯೋಜನೆಗೆ 1ಲಕ್ಷ ಕೋಟಿ ರೂ. ಅನುದಾನ ಹಂಚಿಕೆಗೆ ಅನುಮೋದಿಸಲಾಗಿದೆ. ಪಿಎಂ- ಆರ್‌ಜೆವಿವೈ ಯೋಜನೆಯು ಸುಸ್ಥಿರ ಕೃಷಿ ಉತ್ತೇ ಜಿಸುವ ಗುರಿ ಹೊಂದಿದ್ದು, ಕೃಷಿಯೋನ್ನತಿ ಯೋಜ ನೆ ಯು ಕೃಷಿ ಸ್ವಾವಲಂಬನೆಯ ಮೂಲಕ ರಾಷ್ಟ್ರದ ಆಹಾರ ಭದ್ರತೆಯನ್ನು ಖಾತರಿಪಡಿಸಿಕೊಳ್ಳುವುದರ ಬಗ್ಗೆ ಗಮಹರಿಸಲಿದೆ. ಈ ಎರಡೂ ಯೋಜನೆ ಗಳು ಒಟ್ಟು 1,01,321 ಕೋಟಿ ರೂ.ವೆಚ್ಚದಲ್ಲಿ ಜಾರಿಯಾಗಲಿವೆ. ಜತೆಗೆ ಕೃಷಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಈ 2 ಯೋಜನೆಗಳ ಅಡಿಯಲ್ಲಿ ಸಂಯೋಜಿಸಲೂ ಸಮ್ಮತಿಸಲಾಗಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *