ನವಲಗುಂದ : ಲೋಕಾಯುಕ್ತ ವಿಶೇಷ ತನಿಖಾ ದಳದ ಮುಖ್ಯಸ್ಥ ಎಡಿಜಿಪಿ ಎಂ.ಚಂದ್ರಶೇಖರ್ ಅವರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಕರ್ನಾಟಕ ರಾಜ್ಯ ಜಾತ್ಯತೀತ ಜನತಾದಳದ ನವಲಗುಂದ ಕಾರ್ಯಕರ್ತರು ಒತ್ತಾಯಿಸಿ, ತಹಶೀಲ್ದಾರ ಸುಧೀರ ಸಾಹುಕಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ಅಧ್ಯಕ್ಷ ಶ್ರೀಶೈಲಯ್ಯ ಮೂಲಿಮನಿ, ನಮ್ಮ ನಾಯಕರು ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಎಡಿಜಿಪಿ ಎಂ.ಚಂದ್ರಶೇಖರ ಅವಹೇಳನಕಾರಿ ಪದಬಳಸಿ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದ್ದು ಸರಿಯಲ್ಲ. ಹೀಗಾಗಿ ಅವರನ್ನು ಕರ್ತವ್ಯದಿಂದ ತಕ್ಷಣ ಅಮಾನತುಗೊಳಿಸಬೇಕು ಒತ್ತಾಯಿಸಿದರು.
ಕೇಂದ್ರ ಮಂತ್ರಿಗಳ ಪರಸ್ಥಿತಿಯೇ ಹೀಗಾದರೆ ಜನಸಾಮಾನ್ಯರ ಪರಸ್ಥಿತಿ ಏನು ಈ ಬಗ್ಗೆ ಕ್ರಮ ಅಗತ್ಯ ಕ್ರಮಕ್ಕೆ ಮುಂದಾಗದಿದ್ದರೇ ಕಠಿಣ ಹೊರಾಟ ಅನಿವಾರ್ಯ ಎಂದರು. ಜಿ.ಎನ್. ತೋಟದ, ಫಕೀರಗೌಡ ದೊಡಮನಿ, ಮಂಜುನಾಥ ಹಡಪದ, ಮೈಲಾರಪ್ಪ ವೈದ್ಯ, ಅಪ್ಪಣ್ಣ ಹಿರಗನ್ನವರ ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

