ಹುಬ್ಬಳ್ಳಿ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ಪೊಲೀಸ್ ಔಟ್ ಪೋಸ್ಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ, ಪೊಲೀಸ್ ಸಿಬ್ಬಂದಿ ಮೇಲೆ ಯುವಕನೋರ್ವ ಹಲ್ಲೆ ಮಾಡಿರುವ ಘಟನೆಯೊಂದು ನಡೆದಿದ್ದ ಹಿನ್ನೆಲೆಯಲ್ಲಿ, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಿಮ್ಸ್ ನ ಹೊರ ರೋಗಿಗಳ ಆಸ್ಪತ್ರೆ ಬಳಿ ಶೇಂಗಾ ಮಾರುತಿದ್ದ ವ್ಯಕ್ತಿಯ ಜೊತೆ ಯುವಕನೊಬ್ಬ ಏರು ದ್ವನಿಯಲ್ಲಿ ವಾಗ್ವಾದ ಮಾಡುತಿದ್ದ. ಈ ಸಂದರ್ಭದಲ್ಲಿ ಅಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಆತನನ್ನ ಪ್ರಶ್ನೆ ಮಾಡಿದಕ್ಕೆ ಅವರ ಮೇಲೇನೆ ಹಲ್ಲೆ ಮಾಡಿದ್ದಾನೆ. ನಾನು ಪೊಲೀಸ್ ಅಂತ ಹೇಳಿದರು ಕೂಡ ಕ್ಯಾರೆ ಎನ್ನದೇ ಮನಸೋ ಇಚ್ಛೆ ಪೊಲೀಸ್ ಪೇದೆಯನ್ನು ಥಳಿಸಿದ್ದಾನೆ.
ಇನ್ನು ಘಟನೆ ನಡೆದ ಸ್ಥಳದಲ್ಲಿ ಯಾರೊಬ್ಬರೂ ಸಹಾಯಕ್ಕೆ ಬಾರದೆ ಇರುವುದು ಅಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಅಲ್ದೆ ಸಾರ್ವಜನಿಕರಿಗೆ ರಕ್ಷಣೆ ನೀಡುವ ಪೊಲೀಸರ ಮೇಲೆಯೇ ಈ ರೀತಿ ದೌರ್ಜನ್ಯಗಳು ನಡೆಯುತ್ತಿದ್ದು, ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಇನ್ನು ರಕ್ಷಕ ಪೊಲೀಸ್ ಪೇದೆಯ ಮೇಲೆಯೇ ಏಕಾ ಏಕಿ ಹಲ್ಲೆ ನಡೆಸಿರುವ ವ್ಯಕ್ತಿ ಸ್ವತಃ ಪೊಲೀಸ್ ಸಿಬ್ಬಂದಿ ಕಿಮ್ಸ್ ನ ಪೊಲೀಸ್ ಚೌಕಿಗೆ ಕರೆತಂದು ಹೊಯ್ಸಳಕ್ಕೆ ಕರೆ ಮಾಡಿ, ಪೊಲೀಸ್ ಸಿಬ್ಬಂಧಿ ಮೇಲೆ ಹಲ್ಲೆ ನಡೆಸಿರುವ ವ್ಯಕ್ತಿಯನ್ನ ಕೂಡಲೇ ಬಂಧನ ಮಾಡಿ ಆತನನ್ನು ವಿದ್ಯಾನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದು, ಆರೋಪಿಯ ವಿಚಾರಣೆ ನಡೆಸಿದ್ದಾರೆ.
ಅದೇನೇ ಇರ್ಲಿ ಸಾರ್ವಜನಿಕರ ರಕ್ಷಣೆಗಾಗಿ ಹಗಲಿರುಳು ಶ್ರಮಿಸುವ ಪೊಲೀಸ್ ಸಿಬ್ಬಂಧಿಗೆ ಸಹಕಾರ ನೀಡಬೇಕಿದ್ದ ನಾಗರೀಕರೇ, ಈ ರೀತಿ ಮೃಗೀಯ ವರ್ತನೆ ಮಾಡಿರುವುದು ನಿಜಕ್ಕೂ ದುರ್ದೈವದ ಸಂಗತಿ. ಇನ್ನಾದ್ರೂ ಈ ರೀತಿ ಘಟನೆಗಳು ಮರುಕಳಿಸದಂತೆ ಸಾರ್ವಜನಿಕರು ಮಾನವೀಯ ಮೌಲ್ಯಗಳನ್ನ ಉಳಿಸಿಕೊಳ್ಳಲಿ ಅನ್ನೋದು ನಮ್ಮ ಆಶಯ.
bigtvnews | Hubli Dharwad News | Kannada News | Karnataka News Hubli News | News In Hubli | Local news

