ಧಾರವಾಡ: ಅಣ್ಣಿಗೇರಿ ಎಪಿಎಂಸಿಯಲ್ಲಿ ದಾಸ್ತಾನು ಮಾಡಲಾಗಿದ್ದ ಧಾನ್ಯದ ಚೀಲಗಳು ಕಳುವು ಆಗಿದ್ದರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಸ್‌ಕುಮಾರ್ ವಿಕಾಸ್ ಪ್ರತಿಕ್ರಿಯೆ ನೀಡಿದ್ದಾರೆ.
ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಣ್ಣಿಗೇರಿ ಎಪಿಎಂಸಿ ಗೋದಾಮಿನಲ್ಲಿ ರೈತರು ಬೆಳೆದ ಕಡಲೆ-ಹೆಸರು ದಾಸ್ತಾನು ಮಾಡಲಾಗಿತ್ತು. ಅದರಲ್ಲಿ 4141 ಚೀಲ ಕಡಲೆ ಮತ್ತು ಹೆಸರು ನಾಪತ್ತೆಯಾಗಿದ್ದವು. ಈ ಸಂಬಂಧ ಮೇಲಾಧಿಕಾರಿಗಳು ಅಣ್ಣಿಗೇರಿ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು ಎಂದರು.
ಈ ನಾಪತ್ತೆ ಪ್ರಕರಣ ಪತ್ತೆ ಮಾಡುವುದಕ್ಕಾಗಿ 4 ತನಿಖಾ ತಂಡ ರಚಿಸಲಾಗಿತ್ತು. ಈಗ ಈ ತನಿಖಾ ತಂಡ ಇಬ್ಬರನ್ನು ಬಂಧಿಸಿದೆ. ಪ್ರಭಾ ಉಗ್ರಾಣ ವ್ಯವಸ್ಥಾಪಕ ಆಕಾಶ ಮುಶಣ್ಣವರ ಹಾಗೂ ಆತ ಸಹೋದ್ಯೋಗಿ ಶಶಿಕುಮಾರ ಹಿರೇಮಠ ಎಂಬುವವರನ್ನು ಬಂಧಿಸಲಾಗಿದೆ. ಈ ಇಬ್ಬರೂ ಗದಗ ಮತ್ತು ಧಾರವಾಡದಲ್ಲಿ ಕಡಲೆ, ಹೆಸರು ಮಾರಾಟ ಮಾಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗಳಲ್ಲಿ ಸಾಲ ಸಹ ಪಡೆದಿದ್ದಾರೆ. ಈ ಇಬ್ಬರೂ ಆರೋಪಿಗಳು ಹತ್ತು ದಿನಗಳ ಕಾಲ ಪೊಲೀಸ್ ವಶದಲ್ಲಿದ್ದಾರೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

