ಬೆಳಗಾವಿ: ಕರ್ನಾಟಕದಲ್ಲಿ ಬಳ್ಳಾರಿ ಜಿಲ್ಲೆಯು ವಿಭಜನೆಗೊಂಡು ಹೊಸ ಜಿಲ್ಲೆಯಾದ ವಿಜಯನಗರ ಮೂರು ವರ್ಷಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದಿದೆ. ಇದರ ಬೆನ್ನಲ್ಲೆ ಮೊನ್ನೆಯಷ್ಟೇ ರಾಜ್ಯದ ದೊಡ್ಡ ಜಿಲ್ಲೆ ಬೆಳಗಾವಿಯನ್ನು ವಿಭಜಿಸಬೇಕು ಎಂಬ ಮಾತು ಕೇಳಿ ಬಂದಿತ್ತು.
ಇದೀಗ ರಾಜ್ಯದ ದೊಡ್ಡ ದೊಡ್ಡ ಜಿಲ್ಲೆಗಳು, ತಾಲೂಕುಗಳನ್ನು ವಿಂಗಡಣೆ ಮಾಡಬೇಕು ಎಂಬ ಮಾತು ಬಿಜೆಪಿ ಸಂಸದರಿಂದಲೇ ಕೇಳಿ ಬಂದಿದೆ.
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು, ಬೆಳಗಾವಿ ಜಿಲ್ಲೆಯ ವಿಭಜನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಿದರು. ರಾಜ್ಯದಲ್ಲಿನ ದೊಡ್ಡ ದೊಡ್ಡ ಜಿಲ್ಲೆಗಳನ್ನು ಹಾಗೂ ತಾಲೂಕುಗಳನ್ನು ವಿಭಜನೆ ಮಾಡಬೇಕು ಎಂಬ ವೈಯಕ್ತಿಕ ವಿಚಾರ ಮೊದಲಿನಿಂದಲೂ ನನಗಿದೆ ಎಂದರು.
ಹೀಗೆ ಹೇಳುವ ಮೂಲಕ ಅಖಂಡ ಕರ್ನಾಟಕದ ಜಿಲ್ಲೆ, ತಾಲೂಕುಗಳ ಪ್ರತ್ಯೇಕತೆ ಬಗ್ಗೆ ಬಾಂಬ್ ಸಿಡಿಸಿದರಾ ಎಂದು ಯೋಚಿಸಬೇಡಿ. ಏಕೆಂದರೆ ಸುಗಮ ಆಡಳಿತ ಯಂತ್ರಕ್ಕಾಗಿ, ಸರ್ಕಾರದ ಆಡಳಿತ ಜನರ ಮನೆ ಬಾಗಿಲಿಗೆ ಹೋಗಿ ತಲುಪಬೇಕೆಂದರೆ ಜಿಲ್ಲೆ ಹಾಗೂ ತಾಲೂಕುಗಳನ್ನು ವಿಂಗಡಣೆ ಮಾಡುವುದು ಬಹಳಷ್ಟು ಅವಶ್ಯಕತೆ ಇದೆ. ಇದರಿಂದ ಜನರಿಗೆ ಸುಲಭವಾಗಿ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

