ಬೆಂಗಳೂರು: ಬೆಂಗಳೂರು- ತುಮಕೂರು ರಸ್ತೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೋ ಸೇವೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ.
ನಾಗಸಂದ್ರ ಟು ಮಾದಾವರ ನಡುವಿನ ಮಾರ್ಗದಲ್ಲಿ ಮುಂದಿನ ತಿಂಗಳಲ್ಲೇ ವಾಣಿಜ್ಯ ಸಂಚಾರ ಆರಂಭಗೊಳ್ಳಲಿದ್ದು ತುಮಕೂರು ರಸ್ತೆಯ 3.7 ಕಿ.ಮೀಟರ್ ಅಂತರದ ಮಾರ್ಗ ಮೆಟ್ರೋ ಸಾರ್ವಜನಿಕರಿಗೆ ಮುಕ್ತಗೊಳಿಸಲು ಸನ್ನದ್ದವಾಗಿದೆ.
ಏಳು ವರ್ಷದಿಂದ ಮೆಟ್ರೋಗಾಗಿ ಕಾಯುತ್ತಿದ್ದ ಜನರಿಗೆ ಬಿಎಂಆರ್ಸಿಎಲ್ ನಿಂದ ಗುಡ್ ನ್ಯೂಸ್ ಸಿಕ್ಕಿದೆ. ನಾಗಸಂದ್ರ ಮಾದವಾರ ಮಾರ್ಗದಲ್ಲಿ ಮೆಟ್ರೋ ವಾಣಿಜ್ಯ ಸಂಚಾರ ಆರಂಭಿಸಲು ರೈಲ್ವೆ ಸುರಕ್ಷಿತ ಆಯುಕ್ತರು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ನಿನ್ನೆ ಇಡೀ ದಿನ ಮಂಜುನಾಥ ನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರ ನಡುವೆ ತಪಾಸಣೆ ನಡೆಸಿದ್ದು ನೂತನ ಮಾರ್ಗದಲ್ಲಿ ಸುರಕ್ಷತಾ ಆಯುಕ್ತರಿಂದ ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಿದ್ದಾರೆ, ಪ್ರಯಾಣಿಕರ ಸಂಚಾರಕ್ಕಾಗಿ ಮಾರ್ಗ ಸುರಕ್ಷಿತಿವಾಗಿದೆಯೇ ಎಂಬುದರ ಕುರಿತು ಪರಿಶೀಲನೆ ಮಾಡಿದ ರೈಲ್ವೆ ಸುರಕ್ಷಿತ ಆಯುಕ್ತರು ರೈಲಿನ ವೇಗ,ತಿರುವು, ವಿದ್ಯುತ್ ಪ್ರವಹಿಸುವಿಕೆ, ನಿಲ್ದಾಣ ಮೂಲಸೌಲಭ್ಯ,ಸುರಕ್ಷತೆಗೆ ಕೈಗೊಂಡ ಕ್ರಮ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ರೈಲ್ವೆ ಸುರಕ್ಷಿತ ಆಯುಕ್ತರಿಂದ ನೂತನ ಮಾರ್ಗಕ್ಕೆ ಸೇಫ್ಟಿ ಸರ್ಟಿಫಿಕೇಟ್ ಕೊಟ್ಟಿದ್ದು ನಾಗಸಂದ್ರ ಟು ಮಾದಾವರ ನಡುವೆ ವಾಣಿಜ್ಯ ಸಂಚಾರ ಆರಂಭಿಸಲು ಆಯುಕ್ತರು ಅನುಮತಿ ಕೊಟ್ಟಿದ್ದಾರೆ. ಹೀಗಾಗಿ ನಾಗಸಂದ್ರ ಮಾದವಾರ ಮಾರ್ಗ ಸಾರ್ವಜನಿಕ ಮುಕ್ತಗೊಳಿಸಲು ಬಿಎಂಆರ್ಸಿಎಲ್ ಮುಂದಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





