Breaking News

ವೈದ್ಯರಿಲ್ಲದೆ ರೋಗಿಗಳ ಪರದಾಟ, ಮಾಹಿತಿ ಸಿಕ್ಕರೂ ಸ್ಥಳಕ್ಕೆ ಬಾರದ ಆರೋಗ್ಯಾಧಿಕಾರಿ

ವೈದ್ಯರಿಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೆ ರೋಗಿಗಳು ಪರದಾಡಿ ಪ್ರತಿಭಟನೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಸಿಂಗಸಂದ್ರದಲ್ಲಿ ನಡೆದಿದೆ. ಸಿಂಗಸಂದ್ರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯಕೇಂದ್ರವಿದ್ದು ವೈದ್ಯರುಯಾವುದೇಮಾಹಿತಿ ನೀಡದೆ ಏಕಾಏಕಿ ರಜೆ ಹಾಕಿದ್ದು ಮಾಹಿತಿ ತಿಳಿಯದ ನೂರಾರು ರೋಗಿಗಳು ಗರ್ಭಿಣಿ ಮಹಿಳೆಯರು ಆಸ್ಪತ್ರೆಗೆ ಆಗಮಿಸಿ ವೈದ್ಯರಿಗಾಗಿ ಕಾದು ಕುಳಿತಿದ್ದರು. 12 ಗಂಟೆಯಾದರೂ ವೈದ್ಯರು ಬಾರದ ಹಿನ್ನೆಲೆ ಹಲವು ರೋಗಿಗಳು ಅಸ್ವಸ್ಥರಾಗಿ ಆಸ್ಪತ್ರೆಯ ಮುಂಭಾಗದಲ್ಲೇ ಮಲಗಿದ್ದರು . ಇನ್ನು ತೀವ್ರ ಅಸ್ವಸ್ಥರಾದವರಿಗೆ ಪ್ರಾಥಮಿಕ ಚಿಕಿತ್ಸೆ ನೀಡುವಂತೆ ಆಸ್ಪತ್ರೆಯ ನರ್ಸ್ ಬಳಿ ಕೇಳಿದರು ಯಾರು ರೋಗಿಗಳಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ ತೋರಿದ್ದು ಈ ಹಿನ್ನೆಲೆ ರೋಗಿಗಳು ಹಾಗೂ ಸಂಬಂಧಿಕರು ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಿದರು ಇನ್ನು ತಾಲೂಕು ಆರೋಗ್ಯಾಧಿಕಾರಿಗಳಿಗೆ ಪರಿಸ್ಥಿತಿ ಬಗ್ಗೆ ತಿಳಿಸಿದರು ಸ್ಥಳಕ್ಕೆ ಬರದೆ ನಿರ್ಲಕ್ಷ ತೋರಿದ್ದಾರೆ. ಇನ್ನು ಸಿಂಗಸಂದ್ರ ಸುತ್ತಮುತ್ತ ಗಾರ್ಮೆಂಟ್ಸ್ ನೌಕರರು ಕೂಲಿ ಕಾರ್ಮಿಕರು ಹೆಚ್ಚಾಗಿದ್ದು ಎಲ್ಲರೂ ಈ ಸರ್ಕಾರಿ ಅಸ್ಪತ್ರೆಯನ್ನು ನೆಚ್ಚಿಕೊಂಡಿದ್ದಾರೆ ಆದ್ರೆ ವರ್ಷದಲ್ಲಿ 3 ಭಾರಿ ವೈದ್ಯರ ಬಡಲಾವಣೆಯಾಗಿದ್ದು ರೋಗಿಗಳು ಚಿಕಿತ್ಸೆಗಾಗಿ ದೂರದ ವಾಣಿವಿಲಾಸ್ ವಿಕ್ಟೊರಿಯಾ ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿಯಿದೆ

Share News

About admin

Check Also

ಮೈಸೂರುನಲ್ಲಿ ಸ್ಫೋಟಕಗಳು ಪತ್ತೆ

ಮೈಸೂರು: ಸ್ಫೋಟಕಗಳು ಪತ್ತೆಯಾಗಿರುವ ಘಟನೆ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗೇಟ್ ಬಳಿಯ ಹೋಟೆಲ್ ವೊಂದರಲ್ಲಿ ನಡೆದಿದೆ. ಅಪರಿಚಿತರು ನೀಲಿ ಬಣ್ಣದ …

Leave a Reply

Your email address will not be published. Required fields are marked *