ಹುಬ್ಬಳ್ಳಿ: ಜಿ.ಟಿ ದೇವೇಗೌಡ ಹೇಳಿಕೆ ಬಿಜೆಪಿಗೆ ಏನೂ ಡ್ಯಾಮೇಜ್ ಆಗೋಲ್ಲ. ಜಿ.ಟಿ ದೇವೇಗೌಡ ಮೊನ್ನೆ ಮೊನ್ನೆವರೆಗೆ ಸಿದ್ದರಾಮಯ್ಯ ಮತ್ತು ಅವರ ಸರ್ಕಾರದ ವಿರುದ್ಧ ಮಾತನಾಡಿದ್ದರು. ಈಗ ಏಕಾಏಕಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈಗ ರಾಜಕಾರಣದಲ್ಲಿ ಕೆಲವರಿಗೆ ತಮಗೆ ಬೇಕಾದ ಸ್ಥಾನಮಾನ ಸಿಗದೆ ಇದ್ದಲ್ಲಿ, ಟಿಕೆಟ್, ಮಂತ್ರಿ ಸ್ಥಾನ ಸಿಗದೆ ಹೋದ್ರೆ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ಪಕ್ಷದ ವಿರುದ್ಧ ಮಾತನಾಡುವುದು, ಪಕ್ಷ ಬಿಡುವ ಕೆಲಸ ಮಾಡ್ತಾರೆ ಎಂದರು.
ಪ್ರತಿಯೊಂದು ರಾಜಕೀಯ ಪಕ್ಷಕ್ಕೆ ಅದರದ್ದೆ ಆದ ವಿಚಾರಧಾರೆ ಇರುತ್ತದೆ. ತಮ್ಮ ಸ್ವಂತದ ಅಧಿಕಾರದ ಸ್ಥಾನಮಾನಕ್ಕಾಗಿ ಬಡಿದಾಡಿಕೊಳ್ಳುವವರು ಜಾಸ್ತಿ ಆಗಿದ್ದಾರೆ. ಇತ್ತೀಚಿನವರೆಗೂ ಮುಖ್ಯಮಂತ್ರಿ ವಿರುದ್ದ ಜಿ.ಟಿ ದೇವೇಗೌಡ ಮಾತನಾಡಿದ್ದರು. ಈಗ ಅಚಾನಕ್ಕಾಗಿ ಜೆಡಿಎಸ್ ಪಕ್ಷದಲ್ಲಿ ಏನು ಘಟಾನುವಳಿಗಳು ಆಗಿವೆ ಎಂಬುದನ್ನ ನೋಡಿಕೊಳ್ಳಬೇಕು. ಅವರ ಪಕ್ಷದ ಆಂತರಿಕ ವಿಚಾರ ಅದು. ಈಗ ರಾಜ್ಯ ಸರ್ಕಾರದ ವಿರುದ್ಧ ಮುಡಾ ಮತ್ತು ವಾಲ್ಮೀಕಿ ಹಗರಣ ಕೇಳಿ ಬಂದಿವೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

