Breaking News

ಕರ್ನಾಟಕದಲ್ಲಿ ಡ್ರಗ್ಸ್ ಹೊಂದಿದರವರು 10 ಸಾವಿರಕ್ಕೂ ಹೆಚ್ಚು ಜನ ವಿದೇಶಿಗರಿದ್ದಾರೆ : ಡಾ.ಜಿ.ಪರಮೇಶ್ವರ

ಧಾರವಾಡ: ಡ್ರಗ್ಸ್‌ ವಿರುದ್ಧ ನಾವು ಸಮರ ಸಾರಿದ್ದೇವೆ. ಕರ್ನಾಟಕದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ವಿದೇಶಿಗರಿದ್ದಾರೆ. ಅವರು ಈ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನೆಲ್ಲ ಫರ್ಮನೆಂಟ್ ಆಗಿ ಮಾನಿಟರ್ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ನೂರಕ್ಕೂ ಹೆಚ್ಚು ಜನರನ್ನು ಆಯಾ ದೇಶಕ್ಕೆ ವಾಪಸ್ ಕಳುಹಿಸಿದ್ದೇವೆ. ಆಯಾ ರಾಯಭಾರ ಕಚೇರಿಯವರ ಕ್ಲಿಯರನ್ಸ್ ಕೇಳಿ ವಾಪಸ್‌ ಕಳುಹಿಸುತ್ತಿದ್ದೇವೆ. ಕೇಂದ್ರ ಸರ್ಕಾರದ ಗುಪ್ತಚರ ಸಂಸ್ಥೆಗಳು ಏನು ಮಾಡುತ್ತಿವೆಯೋ ಗೊತ್ತಿಲ್ಲ ಎಂದರು.

RAW, IB ದವರು ವಿದೇಶಿಗರನ್ನು ಹಿಡಿದು ಹಾಕಬೇಕು. ಆನೇಕಲ್ ಬಳಿ ನಾಲ್ಕು ಜನರನ್ನು ನಾವು ಹಿಡಿದಿದ್ದೆವು. ನಾಲ್ಕು ಜನ ನಮ್ಮ ರಾಜ್ಯಕ್ಕೆ ಬಂದು ಒಂದು ವರ್ಷ ಆಯ್ತು. ಆದರೆ, ಅವರು ಈ ದೇಶಕ್ಕೆ ಬಂದು ಹತ್ತು ವರ್ಷ ಆಗಿದೆ. ನಮ್ಮ ಪೊಲೀಸರಡ ಅವರನ್ನು ಹಿಡಿದು IB ದವರಿಗೆ ಮಾಹಿತಿ ಕೊಟ್ಟಿದ್ದರು ಎಂದರು.

Share News

About Shaikh BigTv

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *