ಹುಬ್ಬಳ್ಳಿ: ದೇಶಕ್ಕಾಗಿಯೇ ಜೀವ ತ್ಯಾಗ ಮಾಡಿದ ಬಹುದೊಡ್ಡ ಸ್ವಾತಂತ್ರ್ಯ ವೀರ ಭಗತ್ ಸಿಂಗ್ ಅವರ ಹೆಸರಿನ ಸಂಘಟನೆಯೊಂದು ಸಮಾಜ ಸೇವಕರಿಗೆ ಸನ್ಮಾನಿಸುವ ಮೂಲಕ ಮಹತ್ವದ ಕಾರ್ಯ ಮಾಡಿದೆ. ಹುಬ್ಬಳ್ಳಿಯ ಭಗತ್ ಸಿಂಗ್ ಸಂಘಟನೆಯ ವತಿಯಿಂದ ಸ್ವರ್ಣಾ ಗ್ರೂಪ್ ಮಾಲೀಕರಿಗೆ ಸನ್ಮಾನಿಸಿ, ಅಭಿನಂದನೆ ಸಲ್ಲಿಸಲಾಯಿತು.
ಹುಬ್ಬಳ್ಳಿಯ ಸ್ವರ್ಣಾ ಪ್ಯಾರಡೈಸ್ ನಲ್ಲಿ ಭಗತ್ ಸಿಂಗ್ ಸಂಘಟನೆಯಿಂದ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಸಾಧಕರು ಹಾಗೂ ಸಮಾಜ ಸೇವಕರಾದ ಡಾ.ಸಿ.ಎಚ್.ವಿ.ಎಸ್. ವಿ ಪ್ರಸಾದ್ ಅವರಿಗೆ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು. ಈಗಾಗಲೇ ಸಾಕಷ್ಟು ಯುವ ಸಮುದಾಯಕ್ಕೆ ಪ್ರೋತ್ಸಾಹ ನೀಡುತ್ತಿರುವ ಸಾಧಕರಿಗೆ ಈಗ ಯುವ ಸಮುದಾಯವೇ ಸನ್ಮಾನಿಸಿ ಅಭಿನಂದನೆ ಸಲ್ಲಿಸಿರುವುದು ವಿಶೇಷವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

