ನವದೆಹಲಿ: ಜಾಗತಿಕ ಮಟ್ಟದ ನಿಲ್ದಾಣವಾಗಿ ಅಭಿವೃದ್ಧಿಗೊಂಡಿರುವ ನವದೆಹಲಿ ರೈಲ್ವೆ ನಿಲ್ದಾಣ, ವಾರ್ಷಿಕ ಆದಾಯ ಗಳಿಕೆಯಲ್ಲಿ ಅಗ್ರಸ್ಥಾನದಲ್ಲಿದೆ.
2023-24 ನೇ ಸಾಲಿನ ದೇಶದ 100 ಉತ್ತಮ ಆದಾಯ ಗಳಿಕೆ ಹಾಗೂ ಅತ್ಯಂತ ಜನನಿಬಿಡ ರೈಲು ನಿಲ್ದಾಣಗಳ ಪಟ್ಟಿಯನ್ನು ರೈಲ್ವೆ ಇಲಾಖೆ ಬಿಡುಗಡೆ ಮಾಡಿದ್ದು, ಅಗ್ರಸ್ಥಾನವನ್ನು ನವದೆಹಲಿ ಉಳಿಸಿಕೊಂಡಿದೆ.
ದೆಹಲಿಯ ನಂತರದ ಸ್ಥಾನದಲ್ಲಿ ಪಶ್ಚಿಮ ಬಂಗಾಳದ ಹೌರಾ ನಿಲ್ದಾಣ ಇದ್ದು, 3 ನೇ ಸ್ಥಾನದಲ್ಲಿ ಚೆನ್ನೈ ಎಂಜಿಆರ್ ಸೆಂಟ್ರಲ್ ಇದೆ. ಟಾಪ್ 100ರಲ್ಲಿ ಈ ಮೂರು ರೈಲು ನಿಲ್ದಾಣಗಳು ವಾರ್ಷಿಕ ಗಳಿಕೆ ಮತ್ತು ಪ್ರಯಾಣಿಕರ ಸಂಖ್ಯೆಗಳನ್ನು ಹೊಂದಿವೆ.
ನವದೆಹಲಿ ರೈಲು ನಿಲ್ದಾಣ 2023-24ರಲ್ಲಿ 39,362,272 ಪ್ರಯಾಣಿಕರೊಂದಿಗೆ 3,337 ಕೋಟಿ ರೂ.ಗಿಂತ ಹೆಚ್ಚಿನ ಆದಾಯವನ್ನು ಗಳಿಸಿದೆ. ಹೌರಾದಲ್ಲಿ 1,692 ಕೋಟಿ ಗಳಿಕೆ ಮತ್ತು 61,329,319 ಪ್ರಯಾಣಿಕರನ್ನು ಹೊಂದಿದ್ದರೆ, ಚೆನ್ನೈನ ಎಂಜಿಆರ್ ಸೆಂಟ್ರಲ್ 30,599,837 ಪ್ರಯಾಣಿಕರಿಂದ 1,299 ಕೋಟಿ ಆದಾಯವನ್ನು ಗಳಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





