ಕಲಬುರಗಿ ನಗರದ ಗ್ರಂಥಾಲಯಕ್ಕೆ ಹೋಗುವುದಾಗಿ ಹೇಳಿ ಹೋದ ಯುವಕ ಪ್ರಥಮೇಶ್, ತನ್ನ ಅಕ್ಕನ ಸ್ಕೂಟಿ ತೆಗೆದುಕೊಂಡು ಗುರುವಾರ ಮಧ್ಯಾಹ್ನ ಹಳೆಯ ಕುರಿಕೋಟಾ ಸೇತುವೆ ಮೇಲೆ ನಿಲ್ಲಿಸಿ, ಬಳಿಕ ಸೇತುವೆ ಮೇಲಿಂದ ನದಿಗೆ ಜಿಗಿದಿದ್ದಾನೆ ಎಂದು ತಿಳಿದು ಬಂದಿದೆ. ಯುವಕ ಪ್ರಥಮೇಶ್,ಗುರುವಾರ ಮಧ್ಯಾಹ್ನವೇ ಜಿಗಿದಿರುವುದು ಶಂಕಿಸಲಾಗಿದೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಮೃತದೇಹ ಪತ್ತೆಗಾಗಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯವರ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಹಾಗಾoವ್ ಪೊಲೀಸ್ ಠಾಣೆಯ ಪಿಎಸ್‌ಐ ಅವರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

