ಕಂಪನಿಯ ಮಲ್ಲಪ್ಪ ಶಾಫ್ಟ್‌ನ 2,800 ಆಳದ ವಿಭಾಗದಲ್ಲಿ ಕೆಲಸ ಮಾಡುವಾಗ ಏರ್‌ಬ್ಲಾಸ್ಟ್‌ನಿಂದಾಗಿ ಕಲ್ಲು ಮಿಶ್ರಿತ ಸಡಿಲ ಮಣ್ಣು ಕುಸಿದು ಶರಣಬಸವ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಿರುಪಾದಿ ಅವರಿಗೆ ತೀವ್ರ ಗಾಯಗಳಾಗಿವೆ. ಅವರಿಗೆ ಗಣಿ ಕಂಪನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಗೆ ಕಳುಹಿಸಲಾಗಿದೆ.ದೊಡ್ಡ ಗಾತ್ರದ ಕಲ್ಲು ಮಿಶ್ರಿತ ಮಣ್ಣು ಬಿದ್ದ ಕಾರಣ ಕಾರ್ಮಿಕನ ಮೃತದೇಹ ಹೊರತೆಗೆಯಲು ಕಂಪನಿಯ ರಕ್ಷಣಾ ತಂಡದವರು ಹರಸಾಹಸಪಟ್ಟರು.ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

