Breaking News

ಸೇವಾ ವಿಮುಕ್ತಿ ನೌಕರರಿಗೆ ಬಾಕಿ ಹಣ ನೀಡುವಂತೆ ಪ್ರತಿಭಟನೆ

ಹುಬ್ಬಳ್ಳಿ: ತಮ್ಮ ಇಡೀ ಜೀವನವನ್ನು ಸಾರಿಗೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಾ ನಿವೃತ್ತಿ ಹೊಂದಿದವರು. ಆದ್ರೆ ಸಾರಿಗೆ ಸಂಸ್ಥೆ ಮಾತ್ರ ಇವರ ಸೇವಾ ವಿಮುಕ್ತಿ ನೌಕರರಿಗೆ ಬಾಕಿ ಹಣ ನೀಡದೆ ಗೋಳಾಡಿಸುತ್ತಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸೇವೆ ಮಾಡಿ ನಿವೃತ್ತಿ ಹೊಂದಿದವರು. ಸೇವಾ ವಿಮುಕ್ತಿ ನೌಕರರಿಗೆ ಜನವರಿ 2020 ರಿಂದ 2023 ರವರೆಗಿನ ಅವಧಿಗೆ 15% ರಷ್ಟು ಹೆಚ್ಚಿನ ವ್ಯತ್ಯಾಸದ ಉಪದಾನ ಮತ್ತು ನಿವೃತ್ತಿಗಳಿಗೆ ರಜೆ ನಗದೀಕರಣ ಮೊತ್ತವನ್ನು ಬೇಗನೆ ಪಾವತಿಸಬೇಕೆಂದು ಒತ್ತಾಯ ಮಾಡ್ತಿದ್ದಾರೆ.

ಇವರು ಈಗಾಗಲೇ ಸೇವಾ ನಿವೃತ್ತಿಯಾಗಿದ್ದಾರೆ. ಅತೀ ಕಡಿಮೆ ಪಿಂಚಣಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸ, ಉಪಜೀವನ ಹೀಗೆ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಈ ನಿವೃತ್ತ ನೌಕರರಿಗೆ ಬರಬೇಕಾದ ಯಾವುದೇ ಬಾಕಿ ಮೊತ್ತವಿದ್ದಲ್ಲಿ ಕಡಿತಗೊಳಿಸಿ ಪಾವತಿಸಬೇಕಾದ ನಿವ್ವಳ ಮೊತ್ತದ ಕ್ರೈಮ್‌ಗಳನ್ನು ದಿನಾಂಕ 30-09-2024 ರೊಳಗಾಗಿ ಸಿದ್ಧಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಸಾರಿಗೆ ನಿಗಮ ಆದೇಶ ಹೊರಡಿಸಿತ್ತು.

Share News

About Shaikh BigTv

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *