ಮಹಾರಾಷ್ಟ್ರ : ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಮುಸ್ಲಿಂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಮುದಾಯಗಳನ್ನು ಓಲೈಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ, ಮದ್ರಸಾ ಶಿಕ್ಷಕರ ವೇತನ ಮತ್ತು ಮೌಲಾನಾ ಆಜಾದ್ ಫೈನಾನ್ಶಿಯಲ್ ಕಾರ್ಪೊರೇಶನ್‌ನ ಕಾರ್ಯ ಬಂಡವಾಳವನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
ಡಿ ಎಡ್ ಪದವಿ ಹೊಂದಿರುವ ಪ್ರಾಥಮಿಕ ಶಿಕ್ಷಕರಿಗೆ ಅವರ ಮಾಸಿಕ ವೇತನವು ಪ್ರಸ್ತುತ ರೂ 6,000 ರಿಂದ ರೂ 16,000 ಕ್ಕೆ ಹೆಚ್ಚಿಸಲಾಗುವುದು. ಹಾಗೂ ಬಿಎಡ್ ಹೊಂದಿರುವ ಮಾಧ್ಯಮಿಕ ಶಾಲಾ ಶಿಕ್ಷಕರ ಮಾಸಿಕ ವೇತನವು ರೂ 8,000 ರಿಂದ ರೂ 18,000 ಕ್ಕೆ ಹೆಚ್ಚಿಸಲು ಚಿಂತನೆ ನಡೆಸಿದ್ದಾರೆ.
ಜಾಕಿರ್ ಹುಸೇನ್ ಮದರಸಾ ಆಧುನೀಕರಣ ಯೋಜನೆಯಡಿಯಲ್ಲಿ, ರಾಜ್ಯ ಸರ್ಕಾರವು ಮದರಸಾಗಳಿಗೆ ಧಾರ್ಮಿಕ ಅಧ್ಯಯನದ ಜೊತೆಗೆ ಆಧುನಿಕ ಶಿಕ್ಷಣವನ್ನು ನೀಡುವಂತೆ ಕೇಳಿದೆ. ವಿಜ್ಞಾನ, ಗಣಿತ, ಸಮಾಜಶಾಸ್ತ್ರ, ಇಂಗ್ಲಿಷ್, ಮರಾಠಿ, ಹಿಂದಿ ಮತ್ತು ಉರ್ದುವನ್ನು ಮದರಸಾಗಳಲ್ಲಿ ಕಲಿಸಲು ಉದ್ದೇಶಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

