ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಆರೋಪಿಗೆ 3 ವರ್ಷ ಜೈಲು ಶಿಕ್ಷೆ.
ಪೊಕ್ಸೋ ಪ್ರಕರಣದಲ್ಲಿ ದೋಷಿ ಸಾಬೀತು: ಯುವಕನಿಗೆ 3 ವರ್ಷ ಜೈಲು.
ಬಾಲಕಿ ಕಿರುಕುಳ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ, ₹10 ಸಾವಿರ ದಂಡ
ಬೆಳಗಾವಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯವು 3 ವರ್ಷಗಳ ಜೈಲು ಶಿಕ್ಷೆ ಮತ್ತು ₹10,000 ದಂಡ ವಿಧಿಸಿದೆ..
2024ರ ಜನವರಿ 17ರಂದು ಬೆಳಗಾವಿ ಜಿಲ್ಲೆಯ ಪರಶ್ಯಾನಟ್ಟಿ ಗ್ರಾಮದ ಸಚಿನ್ ಅಪ್ಪಯ್ಯ ನಾಯಕ (24) ಎಂಬಾತ ಅಪ್ರಾಪ್ತ ಬಾಲಕಿಯ ಬಳಿ ಹೋಗಿ ಕಣ್ಣು ಹೊಡೆದು, ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪ್ರಕರಣ ದಾಖಲಾಗಿತ್ತು…
ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354(A) ಹಾಗೂ ಪೊಕ್ಸೋ ಕಾಯ್ದೆ 12 ಅಡಿ ಪ್ರಕರಣ ದಾಖಲಾಗಿತ್ತು…

ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಬೆಳಗಾವಿಯ ಎಫ್‌ಟಿಎಸ್‌ಸಿ-01 ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಸಿ.ಎಂ. ಪುಷ್ಪಲತಾ ಅವರು ಮಾರ್ಚ್ 10, 2026ರಂದು ಆರೋಪಿಗೆ 3 ವರ್ಷಗಳ ಶಿಕ್ಷೆ ಮತ್ತು ₹10,000 ದಂಡ ವಿಧಿಸಿ ಅಂತಿಮ ತೀರ್ಪು ನೀಡಿದ್ದಾರೆ…

ಈ ಪ್ರಕರಣದಲ್ಲಿ ಸರ್ಕಾರಿ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಲ್.ವಿ. ಪಾಟೀಲ ವಾದ ಮಂಡಿಸಿದ್ದರು. ತನಿಖೆಯನ್ನು ಎಸಿಪಿ ಗಂಗಾಧರ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ರವಿ ವಡ್ಡರ್ ಮತ್ತು ಮಂಜುನಾಥ ಹುಲಕಂದ ಅವರು ನಡೆಸಿದ್ದರು…
bigtvnews | Hubli Dharwad News | Kannada News | Karnataka News Hubli News | News In Hubli | Local news

