ಮಡಿಕೇರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಕೆಎ-12 ನಂಬರ್‌ನ ಅಶ್ವಮೇಧ 5 ನೂತನ ಬಸ್‍ಗಳಿಗೆ ಚಾಲನೆಯನ್ನು ನೀಡಿದೆ. 2024ರ ಫೆಬ್ರವರಿಯಲ್ಲಿ ಅಂತರ ನಗರದ ನಡುವೆ ಸಂಪರ್ಕ ಕಲ್ಪಿಸಲು ಕೆಎಸ್‌ಆರ್‌ಟಿಸಿ ಅಶ್ವಮೇಧ ಹೆಸರಿನ ನೂತನ ಬಸ್ ಸೇವೆಗಳಿಗೆ ಚಾಲನೆಯನ್ನು ನೀಡಿದೆ.
ಈಗಾಗಲೇ ರಾಜ್ಯದ ವಿವಿಧ ಭಾಗದಲ್ಲಿ ಈ ಮಾದರಿ ಬಸ್‌ಗಳು ಸಂಚಾರ ನಡೆಸುತ್ತಿದ್ದು, ಉತ್ತಮ ಪ್ರತಿಕ್ರಿಯೆ ಸಹ ಸಿಕ್ಕಿದೆ.
ಕೆಎಸ್‍ಆರ್‌ಟಿಸಿಯ 5 ಅಶ್ವಮೇಧ ನೂತನ ಬಸ್‍ಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ನಗರದ ಕೆಎಸ್‍ಆರ್‌ಟಿಸಿ ಘಟಕದಲ್ಲಿ ಚಾಲನೆ ನೀಡಿದರು. ಶಾಸಕರು ಮಾತನಾಡಿ, ದಸರಾ ವಿಶೇಷ ಸಂದರ್ಭವಾಗಿ ಅಂತರ್ ಜಿಲ್ಲೆಗೆ ಬಸ್ ಅನ್ನು ಓಡಿಸಲಾಗುತ್ತದೆ. ದಸರಾ ನಂತರವೂ ಕೊಡಗು ಜಿಲ್ಲೆಯಲ್ಲಿ ಬಸ್ ಸಂಚಾರ ನಡೆಸಲಿದೆ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

