Breaking News

ರಾಜ್ಯ ಸರ್ಕಾರದಿಂದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಗೌರವಧನ ಬಿಡುಗಡೆ

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನೀಡಬೇಕಿದ್ದ ಮೂರು ತಿಂಗಳ ಗೌರವಧನದ ಹಿಂಬಾಕಿ ಮತ್ತು ಅಕ್ಟೋಬರ್‌ ತಿಂಗಳ ಗೌರವಧನವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬಿಡುಗಡೆಗೊಳಿಸಿದೆ.
ಜೂನ್‌, ಆಗಸ್ಟ್‌, ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳ ಗೌರವಧನಕ್ಕಾಗಿ ₹452 ಕೋಟಿ ಬಿಡುಗಡೆ ಮಾಡಿದೆ. ಜೊತೆಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ರಾಜ್ಯದ 31 ಜಿಲ್ಲೆಗಳ 204 ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಿಬ್ಬಂದಿಯ ವೇತನ, ಬಾಹ್ಯಮೂಲ, ದಿನಗೂಲಿ ಸಿಬ್ಬಂದಿಯ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳ ಗೌರವಧನ ಮತ್ತು ಆಡಳಿತ ವೆಚ್ಚಕ್ಕಾಗಿ ₹42 ಕೋಟಿ ಬಿಡುಗಡೆ ಮಾಡಿದೆ.
ಇದಲ್ಲದೇ ರಾಜ್ಯ ಸರ್ಕಾರದಿಂದ ಮಂಜೂರಾಗಿರುವ ನಗರ ಪ್ರದೇಶ 450 ಅಂಗನವಾಡಿ ಕೇಂದ್ರಗಳು ಹಾಗೂ ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ರಾಜ್ಯ ಸರ್ಕಾರದಿಂದ ಮಂಜೂರಾದ 3,538 ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರಿಗೆ ಗೌರವಧನ ಪಾವತಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿದೆ.

Share News

About BigTv News

Check Also

ಟಿ. ನರಸೀಪುರ: ಹಾಡಹಗಲೇ ಯುವಕನ ಬರ್ಬರ ಕೊಲೆ; ಠಾಣೆಗೆ ಹಾಜರಾದ ಮೂವರು ಆರೋಪಿಗಳು

ಟಿ.ನರಸೀಪುರದ ವಿವೇಕನಗರದಲ್ಲಿ ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ಸುಭಾಷ್ (34) ಎಂಬ ಯುವಕನನ್ನು ಮೂವರು ಆರೋಪಿಗಳು ಡ್ರ್ಯಾಗರ್‌ ಮತ್ತು ಚೂರಿಯಿಂದ …

Leave a Reply

Your email address will not be published. Required fields are marked *