Breaking News

ವಯನಾಡು ಉಪ ಚುನಾವಣೆಗೆ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ: ಕಾಂಗ್ರೆಸ್ ಘೋಷಣೆ

ನವದೆಹಲಿ: ಭಾರತದ ಚುನಾವಣಾ ಆಯೋಗವು (ಇಸಿಐ) ಇಂದು ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನ ವಿಧಾನಸಭಾ ಚುನಾವಣೆಯ ಜತೆಗೆ 2 ಲೋಕಸಭಾ ಸ್ಥಾನಗಳ ಉಪಚುನಾವಣೆ ದಿನಾಂಕಗಳನ್ನು ಪ್ರಕಟಿಸಿದೆ ವಯನಾಡು ಲೋಕಸಭಾ ಕ್ಷೇತ್ರಕ್ಕೆ ನವೆಂಬರ್ 13ರಂದು ಉಪಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದೆ.
47 ವಿಧಾನಸಭಾ ಕ್ಷೇತ್ರಗಳೊಂದಿಗೆ ಉಪಚುನಾವಣೆ ನಡೆಸಲಾಗುವ ಏಕೈಕ ಲೋಕಸಭಾ ಕ್ಷೇತ್ರ ವಯನಾಡು, ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 25 ಕೊನೆಯ ದಿನವಾಗಿದ್ದು, ಉಮೇದುವಾರಿಕೆ ಹಿಂಪಡೆಯಲು ಅಕ್ಟೋಬರ್ 30 ಕೊನೆಯ ದಿನಾಂಕವಾಗಿದೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದ್ದು, ಅದೇ ದಿನಾಂಕದಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ 2024ರ ಲೋಕಸಭಾ ಚುನಾವಣೆಯಲ್ಲಿ ಎರಡು ಸ್ಥಾನಗಳಿಂದ ಸ್ಪರ್ಧಿಸಿದ್ದರು. ಒಂದು ಕೇರಳದ ವಯನಾಡು ಮತ್ತು ಇನ್ನೊಂದು ಉತ್ತರ ಪ್ರದೇಶದ ರಾಯ್​​ ಬರೇಲಿ ಕ್ಷೇತ್ರ, ಸ್ಪರ್ಧಿಸಿದ ಎರಡೂ ಕ್ಷೇತ್ರಗಳಿಂದ ಚುನಾವಣೆಯಲ್ಲಿ ಗೆದ್ದಿದ್ದರು ಆದರೆ ಅವರು ರಾಯ್​​ ಬರೇಲಿ ಕ್ಷೇತ್ರವನ್ನು ಪ್ರತಿನಿಧಿಸಲು ನಿರ್ಧರಿಸಿದರು.
4,31,770 ಮತಗಳ ದಾಖಲೆಯ ಅಂತರದಿಂದ ಗೆದ್ದರು ರಾಹುಲ್​ ಗಾಂಧಿ ಅವರು ವಯನಾಡು ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ವಯನಾಡಿಗೆ ಸಂಸದರೊಬ್ಬರ ಅಗತ್ಯವಿತ್ತು ಈಗ ಅವರ ಸ್ಥಾನಕ್ಕೆ ವಯನಾಡಿನಲ್ಲಿ ನಡೆಯಲಿರುವ ಉಪಚುನಾವಣೆಗೆ ಅಭ್ಯರ್ಥಿಯನ್ನಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕಾಂಗ್ರೆಸ್ ಘೋಷಿಸಿದೆ.

Share News

About BigTv News

Check Also

ದಲಿತ ಮಹಿಳೆಗೆ ಜಾತಿ ನಿಂದನೆ ಮಾಡಿ, ಲೈಂಗಿಕ ಕಿರುಕುಳ : ‘MSIL’ ಅಧಿಕಾರಿಗಳ ವಿರುದ್ಧ ದೂರು ದಾಖಲು!

ಬೆಂಗಳೂರು : ದಲಿತ ಮಹಿಳೆಯನ್ನು ಎಂಎಸ್‌ಐಎಲ್ ಅಧಿಕಾರಿಗಳು ಇದೀಗ ಅವಮಾನ ಮಾಡಿದ್ದಾರೆ. ಎಂಎಸ್‌ಐಎಲ್ ನಲ್ಲಿ ಕೆಲಸ ಮಾಡುತ್ತಿರುವ ದಲಿತ ಮಹಿಳೆಯ …

Leave a Reply

Your email address will not be published. Required fields are marked *