Breaking News

ಫುಟ್‌ಪಾತ್ ವ್ಯಾಪಾರಸ್ಥರ ತೆರವು

ಸಿಲಿಕಾನ್ ಸಿಟಿಯ ವಾಣಿಜ್ಯ ಕೇಂದ್ರ ಸಿಟಿ ಮಾರುಕಟ್ಟೆ. ಇಂತಹ ನಗರ , ರಸ್ತೆಯಲ್ಲಿ ವಾಹನವಿರಲೀ ಮನುಷ್ಯರು ಓಡಾಡುವುದೇ ಕಷ್ಟ. ಇದರಿಂದಾಗಿ ಮಾರುಕಟ್ಟೆಯ ಪ್ರಮುಖ ರಸ್ತೆಯಿಂದ ನಗರದ ಬಸ್ ನಿಲ್ದಾಣದಕ್ಕೆ ಸಂಪರ್ಕ ಕಲ್ಪಿಸುವ ಹಾಗೂ ಪಾದಚಾರಿಗಳು ಸಂಚರಿಸುವ ರಸ್ತೆ ಬದಿಯ ಫುಟ್ ಪಾತ್ ಮೇಲೆ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳನ್ನು ಮಹಾನಗರ ಪಾಲಿಕೆ ಹಾಗೂ ನಗರಠಾಣೆ ಪೊಲೀಸ್ ಸಿಬ್ಬಂದಿ ಇಂದು ತೆರವುಗೊಳಿಸಿದರು. ಫುಟ್‌ಪಾತ್ ವ್ಯಾಪಾರಸ್ಥರ ತೆರವು ಕಾಮಗಾರಿಗೆ ಚಾಲನೆ ನೀಡಿದ ನಗರಠಾಣೆ ಪೊಲೀಸರು ಮಾರುಕಟ್ಟೆ ರಸ್ತೆಯಿಂದ ನಿಲ್ದಾಣದಿಂದ ಕಾವೇರಿ ಭವನದ ವರೆಗಿನ ಫುಟ್ ಪಾತ್ ಮೇಲಿನ ಅಂಗಡಿ ಮುಂಗಟ್ಟು ಹಾಗೂ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದವರಿಗೆ ದಂಡ ವಿಧಿಸಿದರು. ನಗರದ ಮುಖ್ಯರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಮಾಡುವುದು ಹಾಗೂ ಬಹುತೇಕ ಅಂಗಡಿಗಳವರು ತಮ್ಮ ಅಂಗಡಿ ಸರಕನ್ನು ಅಂಗಡಿಯಿಂದ ಹೊರಗಡೆ ರಸ್ತೆಯಲ್ಲಿ ಹಾಕುವುದರಿಂದ ನಗರದ ಮುಖ್ಯರಸ್ತೆಗಳಲ್ಲಿ ಸಂಚರಿಸುವುದು ಕಷ್ಟಕರವಾಗುತ್ತದೆ. ಈ ಬಗ್ಗೆ ನಾಗರಿಕರು ಹಲವಾರು ಭಾರಿ ನಗರಸಭೆಗೆ ಮನವಿ ಮಾಡಿದ ಹಿನ್ನಲೆಯಲ್ಲಿ ಸಿಬ್ಬಂದಿಯೊಂದಿಗೆ ಫುಟ್‌ಪಾತ್ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಪಾದಚಾರಿ ಮಾರ್ಗದಲ್ಲಿ ಯಾವುದೇ ನಾಮಫಲಕ ಹಾಗೂ ಅಂಗಡಿ ಸರಕುಗಳನ್ನು ಇಡದೇ ಪಾದಚಾರಿಗಳು ಸುಗಮವಾಗಿ ಸಂಚರಿಸಲು ಅಂಗಡಿ ಮಾಲೀಕರು ಮತ್ತು ಸಾರ್ವಜನಿಕರು ಸಹಕರಿಸಬೇಕೆಂಬುದು ಮಹಾನಗರ ಪಾಲಿಕೆ ಸೂಚನೆಯಾಗಿದೆ.

Share News

About admin

Check Also

Karnataka Police: ಇನ್ನು ಶಾಸಕರ ‘ಮಿನಿಟ್’ಗೆ ಬ್ರೇಕ್..? ಪೊಲೀಸ್ ವರ್ಗಾವಣೆಯಲ್ಲಿ ಗೃಹ ಇಲಾಖೆಯ ಬಿಗ್ ಸರ್ಜರಿ..!

ರಾಜ್ಯ ಪೊಲೀಸ್ ಇಲಾಖೆಯಲ್ಲಿ ವರ್ಷಗಳಿಂದ ಕೇಳಿಬರುತ್ತಿರುವ.. ರಾಜಕೀಯ ನಾಯಕರ ಕೈಗೊಂಬೆ ಇನ್ಸ್‌ಪೆಕ್ಟರ್‌ಗಳಿಗೆ ಬ್ರೇಕ್..? ಪೊಲೀಸ್ ವರ್ಗಾವಣೆಯಲ್ಲಿ ಭಾರೀ ಸರ್ಜರಿ..! ಶಾಸಕರ …

Leave a Reply

Your email address will not be published. Required fields are marked *