Breaking News

ಪ್ರೀತಿಸಿ ಮದುವೆಯಾದ ಜೋಡಿಗೆ ಬೇಕಿದೆ ರಕ್ಷಣೆ

ಹುಬ್ಬಳ್ಳಿ : ಪ್ರೀತಿಸಿ ಮದುವೆಯಾದ ಜೋಡಿಗೆ ಹುಡುಗಿ ಮನೆಯವರು ಜೀವ ಬೆದರಿಕೆ ಹಾಕಿದ್ದ, ಈ ಹಿನ್ನೆಲೆ ಜೋಡಿ ಇದೀಗ ಜೀವದ ಭಯಕ್ಕೆ ಮಾಧ್ಯಮದ ಮುಂದೆ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಮದುವೆಯಾದ ಜೋಡಿ ಇದೀಗ ರಕ್ಷಣೆ ಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ.

ಆನಂದ ದೊಡ್ಡಮನಿ (21) ಮೇಘಾನಾ(19) ಪ್ರೀತಿಸಿ ಮದುವೆಯಾದ ಜೋಡಿ.ಆನಂದ ಆಟೋ ಚಾಲಕರಾಗಿದ್ದು, ಯುವತಿ ಮೇಘಾನಾ ಕಾಲೇಜು ವಿದ್ಯಾರ್ಥಿನಿ.. ಇಬ್ಬರು ಕಳೆದ ಮೂರು ವರ್ಷದಿಂದ ಪ್ರೀತಿ ಮಾಡುತ್ತಿದ್ದಾರಂತೆ.. ಇತ್ತೀಚೆಗೆ ಇವರ ಪ್ರೀತಿ ವಿಷಯ ಮೇಘಾನಾ ಮನೆಯವರಿಗೆ ಗೊತ್ತಾಗಿದೆ. ಈ ಹಿನ್ನೆಲೆ ಮೇಘಾನಾಳನ್ನ ಕಟುಂಬಸ್ಥರು ಮನೆಯಲ್ಲಿ ಕೂಡಿಹಾಕಿ ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿಭಯದಲ್ಲೆ ಮೂರು ದಿನಗಳಿಂದ ಹಿಂದೆ ಮನೆ ಬಿಟ್ಟು ಬಂದು ಮದುವೆಯಾಗಿದ್ದಾರೆ.

ಇದರಿಂದ ಕೋಪಗೊಂಡ ಮೇಘಾನಾ ಕುಟುಂಬಸ್ಥರು, ಆನಂದ ಮನೆಗೆ ನುಗ್ಗಿ ತಂದೆ-ತಾಯಿ ಮೇಲೆ ಹಲ್ಲೆ ನಡೆಸಿ, ತಂದೆ- ತಾಯಿಗೆ ಕೊಲೆ ಬೆದರಿಕೆ ಹಾಕಿದ್ದಾರಂತೆ.. ಅಲ್ಲದೆ ಮೇಘಾನಾ ಮತ್ತು ಆನಂದ ಸಿಕ್ಕಿರೆ ಅಲ್ಲಿಯೇ ಕೊಂದು ಬಿಡ್ತೀವಿ ಅಂತ ವಾರ್ನಿಂಗ್ ಬೇರೆ ಕೊಟ್ಟಿದ್ದಾರೆ. ಇದರಿಂದ ಭಯದಲ್ಲಿ ಆನಂದ ಮತ್ತು ಮೇಘಾನಾ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

Share News

About Shaikh BigTv

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *