Breaking News

ಜಮೀನಿನಲ್ಲಿ ಹಾಳಾಗಿರುವ ಬೆಳೆಗಳಿಗೆ ಪರಿಹಾರ ನೀಡಬೇಕೆಂದು ಮನವಿ ಸಲ್ಲಿಕೆ

ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿರುವ ನರಚನಹಳ್ಳ ಮಳೆ ಬಂದಾಗ ನೀರು ತುಂಬಿ ರಭಸದಿಂದ ಹರಿದು ಪ್ರವಾಹ ಸೃಷ್ಟಿ ಮಾಡುವ ಸಂದರ್ಭದಲ್ಲಿ ಬೆಣ್ಣೆ ಹಳ್ಳ ಹಾಗೂ ನರಚನಹಳ್ಳ ತುಂಬಿ ಹರಿಯುವ ವೇಳೆ ನರಚನಹಳ್ಳದ ನೀರು ತನ್ನ ಹರಿವಿನಲ್ಲಿ ಸೇರಿಸಿಕೊಳ್ಳದೆ ರೈತರ ಜಮೀನುಗಳಿಗೆ ಪ್ರತಿ ವರ್ಷವೂ ನುಗ್ಗಿ ಬೆಳೆಯನ್ನು ಹಾಳು ಮಾಡುತ್ತಿದೆ.

ನರಚನಹಳ್ಳವನ್ನು ಕೂಡಲೇ ಹೂಳೆತ್ತುವ ಕಾರ್ಯವನ್ನು ಮಾಡಬೇಕು ಹಾಗೂ ಹಳ್ಳದ ನೀರು ನುಗ್ಗಿ ಅಕ್ಕಪಕ್ಕ ಜಮೀನಿನಲ್ಲಿ ಹಾಳಾಗಿರುವ ಬೆಳೆಗಳಿಗೆ ಪರಿಹಾರ ನೀಡಬೇಕೆಂದು ರತ್ನ ಭಾರತ ರೈತ ಸಮಾಜದ ತಾಲೂಕ ಅಧ್ಯಕ್ಷ ನೇತೃತ್ವದಲ್ಲಿ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಾಗಪ್ಪ ಸಿದ್ದೂನವರ, ರವಿರಾಜ ಅಂಬಳಿ, ಅನೇಕ ರೈತಪರ ಸಂಘಟನೆಯ ಪದಾಧಿಕಾರಿಗಳು ರೈತರು ಉಪಸ್ಥಿತರಿದ್ದರು.

Share News

About Shaikh BigTv

Check Also

ಅಯ್ಯೋ ಪಾಪ ಅಂದಿದ್ದೇ ತಪ್ಪಾಯ್ತು: ಎಂಬಿಬಿಎಸ್ ವಿದ್ಯಾರ್ಥಿನಿ ಸ್ನೇಹಿತೆಯ ಸೋಗಿನಲ್ಲಿ ಒಂದು ಲಕ್ಷ ರೂ. ವಂಚನೆ!

ವಿದೇಶದಲ್ಲಿ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯ ಕಾಲೇಜು ಶುಲ್ಕ ಪಾವತಿಸುವ ತುರ್ತು ಪರಿಸ್ಥಿತಿಯನ್ನು ಬಳಸಿಕೊಂಡು ಸೈಬರ್ ವಂಚಕರು ಬೆಂಗಳೂರಿನ ಕುಟುಂಬವೊಂದಕ್ಕೆ …

Leave a Reply

Your email address will not be published. Required fields are marked *