ಬೆಂಗಳೂರು – ಪೊಲೀಸ್ ವಶದಲ್ಲಿದ್ದ ಯುವಕ, ರಿಹ್ಯಾಬ್ ಸೆಂಟರ್‌ಗೆ ಸೇರಿದ 10 ದಿನಗಳಲ್ಲೇ ಸಾವಿಗೀಡಾದ ಘಟನೆ ನಗರದಲ್ಲಿ ದೊಡ್ಡ ಸಂಚಲನ ಎಬ್ಬಿಸಿದೆ. ವಿವೇಕನಗರದ ಸೊಣ್ಣೆನಹಳ್ಳಿಯ ದರ್ಶನ್, 23 ವರ್ಷದ ಯುವಕ. ರಿಹ್ಯಾಬಿಲಿಟೇಷನ್ ಸೆಂಟರ್‌ನಲ್ಲಿ ಈತನಿಗೆ ಸಾವು ಸಂಭವಿಸಿದೆ. ಕುಟುಂಬದವರ ಸ್ಪಷ್ಟವಾಗಿ
“ದರ್ಶನ್ ಅಸಹಜವಾಗಿ ಸತ್ತಿಲ್ಲ… ಹಲ್ಲೆ, ಕಿರುಕುಳ… ಕೊನೆಗೆ ಕೊಲೆ..! ಎಂದು ಆರೋಪಿಸಿದ್ದಾರೆ.. ನವೆಂಬರ್ 12 ರಂದು ದರ್ಶನ್ ಅವರನ್ನು ಪೊಲೀಸರು ಅಕ್ರಮವಾಗಿ ಬಂಧಿಸಿದರೆಂಬ ದೂರು ನೀಡಿದ್ದಾರೆ. 3 ದಿನಗಳ ಕಾಲ ಕಸ್ಟಡಿಯಲ್ಲಿ ಹಿಂಸೆ, ಲಾಠಿ, ಪೈಪ್‌ನಿಂದ ಹಲ್ಲೆ ನಂತರ ಹಿಂಸೆಯ ಗುರುತು ಮರೆಮಾಚಲು ರಿಹ್ಯಾಬ್ ಸೆಂಟರ್‌ಗೆ ಶಿಫ್ಟ್ ಮಾಡಿದ್ದಾರೆ ಎಂದಿದ್ದಾರೆ.. ಕುಟುಂಬದವರ ಆರೋಪ ಪ್ರಕಾರ —ರಿಹ್ಯಾಬ್ ಸೆಂಟರ್‌ನಲ್ಲೂ ಸರಿಯಾದ ಚಿಕಿತ್ಸೆ ನೀಡಲಿಲ್ಲ. ಅದೇ ಕಾರಣಕ್ಕೆ ಕೇವಲ 8 ದಿನಗಳಲ್ಲಿ ದರ್ಶನ್‌ನ ಸ್ಥಿತಿ ಗಂಭೀರವಾಗಿ, ಜೀವ ಕಳೆದುಕೊಂಡಿದ್ದಾನೆ. ದರ್ಶನ್ ಪೋಷಕರು ನೇರ ದೂರು ನೀಡಿದ್ದಾರೆ.
ಈಗ ಮೊಕದ್ದಮೆ ದಾಖಲಾಗಿದೆ. ವಿವೇಕನಗರ ಪೊಲೀಸ್ ಇನ್ಸ್‌ಪೆಕ್ಟರ್ ಶಿವಕುಮಾರ್ ಪವನ್ ಸೇರಿದಂತೆ 4 ಮಂದಿ ಪೊಲೀಸರು “ಯೂನಿಟಿ ರಿಹ್ಯಾಬ್ ಸೆಂಟರ್” ಮಾಲೀಕರು ಎಲ್ಲರ ಮೇಲೂ ಕೊಲೆ ಮತ್ತು ಅಟ್ರಾಸಿಟಿ ಪ್ರಕರಣ ದಾಖಲಿಸಲಾಗಿದೆ.—ಪ್ರಕರಣ ಸಿಐಡಿಗೆ ವರ್ಗಾವಣೆ ಘಟನೆ ಗಂಭೀರವಾದ ಹಿನ್ನೆಲೆಯಲ್ಲಿ — ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಸಿಐಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ದರ್ಶನ್ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು,
ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ದರ್ಶನ್ ಹಿಂದೆ —ಒಬ್ಬ ಹೆಂಡತಿ… ಒಬ್ಬ ಪುಟ್ಟ ಮಗು. “ಅಸಹಜ ಸವೋ… ಕಸ್ಟೋಡಿಯಲ್ ಡೆತ್‌ವೋ? ಸತ್ಯ ಹೊರಬರುವುದು ತನಿಖೆ ಮುಗಿದಾಗ.”
bigtvnews | Hubli Dharwad News | Kannada News | Karnataka News Hubli News | News In Hubli | Local news

