ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಧಾರವಾಡ ಕಡೆಗೆ ಆಸಿಡ್ ತೆಗೆದುಕೊಂಡು ಹೋಗುತ್ತಿದ್ದ ಟ್ಯಾಂಕರ್ ವಾಹನ ದಾರಾವತಿ ಟೆಂಪಲ್ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಟ್ಯಾಂಕರಲ್ಲಿದ್ದ ಆಸಿಡ್ ಎಲ್ಲ ಲಿಕೇಜ್ ಆಗಿ ರಸ್ತೆ ಪೂರ್ತಿ ಹರಿದ ಪರಿಣಾಮ ದಟ್ಟ ಹೊಗೆ ಆವರಿಸಿಕೊಂಡು ಬೈಪಾಸ್ ನಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.
ಆಸಿಡ್ ರಸ್ತೆ ತುಂಬಾ ಬಿದ್ದ ಕೂಡಲೇ ದಟ್ಟ ಹೊಗೆಯಿಂದ ವಾಹನ ಸಂಚಾರಕ್ಕೆ ಅನಾನುಕೂಲವಾದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಸಂಚಾರಿ ವಿಭಾಗದ ಡಿಸಿಪಿ ರವೀಶ ಅಗ್ನಿಶಾಮಕ ದಳದ ಸಿಬ್ಬಂದಿ ಕರೆಯಿಸಿ ಯಾವುದೇ ರೀತಿಯಾದ ದುರ್ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿದ್ದಾರೆ.
ಸದ್ಯ ಟ್ಯಾಂಕರ್ ನಲ್ಲಿ ಇದ್ದ ಎಲ್ಲ ಆಸಿಡ್ ಸಂಪೂರ್ಣವಾಗಿ ರಸ್ತೆ ಪಾಲಾಗಿದ್ದು ನಡೆಯಬಹುದಾದ ದೊಡ್ಡ ದುರಂತ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ತಪ್ಪಿದಂತಾಗಿದೆ. ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

