ನವಲಗುಂದ : ಮಹರ್ಷಿ ವಾಲ್ಮೀಕಿಯು ಕವಿಕುಲದ ಗುರುವಾಗಿ ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದರು ವಾಲ್ಮೀಕಿಯವರಿಂದ ರಚನೆಯಾದ ರಾಮಾಯಣವು ಇಂದಿಗೂ ಮೌಲ್ಯಯುತವಾಗಿದೆ ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಧಾನ ಗುರುಮಾತೆ ಆರ್.ಎನ್. ಹಾಲಿಗೇರಿ ಹೇಳಿದರು.
ಅವರು ಪಟ್ಟಣದ ಸರಕಾರ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳು ಶಾಲೆ ನಂ 1ರಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಮಹರ್ಷಿ ವಾಲ್ಮೀಕಿಯವರು ಕವಿಕುಲ ಸಾರ್ವಭೌಮರಾಗಿ ಸಾಹಿತ್ಯ ಲೋಕದಲ್ಲಿ ನಿತ್ಯವೂ ಆರಾಧಿಸಲ್ಪಟ್ಟಿದ್ದಾರೆ. ಕವಿತೆ ಎಂಬ ಮರದ ಕೊಂಬೆಯನ್ನು ಏರಿ ತನ್ನ ಮಧುರವಾದ ಕಂಠದಿಂದ ಇಂಪಾದ ರಾಮನಾಮವನ್ನು ಹಾಡುತ್ತಿರುವ ಮಹರ್ಷಿ ವಾಲ್ಮೀಕಿ ಎಂಬ ಕೋಗಿಲೆಗೆ ನಮಸ್ಕಾರ ಎಂದರು.
ಶಿಕ್ಷಕರಾದ ಡಿ.ಎಚ್.ಮಳಲಿ, ಎನ್.ಎಸ್. ತಾಳಿಕೋಟಿಮಠ, ಮಮತಾಜ ನದಾಫ್, ಅಡುಗೆ ಸಹಾಯಕಿಯರಾದ ಮಲ್ಲಮ್ಮ ಭೋವಿ, ಶಶಿಕಲಾ ಸವಣೂರ ಹಾಗೂ ವಿದ್ಯಾರ್ಥಿಗಳು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

