Breaking News

ಪತ್ನಿ ತವರೂರಲ್ಲಿ ಪತಿ ಮೇಲೆ ಹಲ್ಲೆ

ಚಿಂತಾಮಣಿ: ಕೌಟುಂಬಿಕ ಕಲಹಕ್ಕೆ ಬೇಸರಗೊಂಡು ತವರು ಸೇರಿದ್ದ ಪತ್ನಿಯನ್ನು ಮಾತನಾಡಿಸಲು ಹೋದ ಪತಿ ಮೇಲೆ ಪತ್ನಿಯ ಕುಟುಂಬದವರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ದೊಡ್ಡಬಳ್ಳಾಪುರ ತಾಲೂಕಿನ ಪಾಲನ ಜೋಗಹಳ್ಳಿ ಮುನಿರಾಜು (37) ಹಲ್ಲೆಗೊಳಗಾದವರು. ಚಿಂತಾಮಣಿ ತಾಲೂಕಿನ ಬಂಡಮಿಂದಪಲ್ಲಿ ಗ್ರಾಮದ ಮಹಿಳೆಯನ್ನು ಮುನಿರಾಜು ಮದುವೆಯಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ. 5 ವರ್ಷಗಳಿಂದ ಸಂಸಾರದ ವಿಚಾರದಲ್ಲಿ ಉಂಟಾದ ಮನಸ್ತಾಪಗಳಿಂದ 2ನೇ ಮಗನನ್ನು ಕರೆದುಕೊಂಡು ತವರು ಮನೆಗೆ ಹೋಗಿದ್ದಾರೆ. ಇತ್ತೀಚೆಗೆ ಮುನಿರಾಜು ಬಂಡಮಿಂದಪಲ್ಲಿಗೆ ಹೋಗಿ ಇಬ್ಬರನ್ನು ಮಾತನಾಡಿಸಿದ್ದರು. ಜತೆಗೆ ದೇವರ ಕಾರ್ಯಕ್ರಮಕ್ಕಾಗಿ 2ನೇ ಮಗುವನ್ನು ಕರೆದುಕೊಂಡು ಹೋಗಲು ಏ.13ರಂದು ಪತ್ನಿ ತವರಿಗೆ ಬಂದಾಗ ಆಕೆಯ ಕುಟುಂಬದವರು ಗಲಾಟೆ ಮಾಡಿ, ರಾಡ್​ನಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದು, ಚಿಂತಾಮಣಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದ ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಏ.14ರಂದು ಪ್ರಕರಣ ದಾಖಲಿಸಿದ್ದಾರೆ.

Share News

About BigTv News

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *