ಕುಂದಗೋಳ: ನೀರನ್ನು ಕಾಯಿಸಲು ಕ್ವಾಯಿಲ್ ಹಾಕುವ ವೇಳೆ ವಿದ್ಯುತ್ ಶಾಕ್ ಆಗಿ ಯುವಕನೋರ್ವ ಮೃತಪಟ್ಟ ಘಟನೆ ಕುಂದಗೋಳ ತಾಲೂಕಿನ ಕುಂಕೂರು ಗ್ರಾಮದಲ್ಲಿ ಸಂಭವಿಸಿದೆ. ಕುಂದಗೋಳ ತಾಲೂಕಿನ ಕುಂಕೂರು ಗ್ರಾಮದ ಅಲಿ ಮರ್ತುಜಾ ಮೌಲಾಲಿ ದೊಡ್ಡಮನಿ (21) ಮೃತ ದುರ್ದೈವಿಯಾಗಿದ್ದಾನೆ.
ಕುಂಕೂರು ಗ್ರಾಮದ ಜಾಮೀಯಾ ಮಸೀದಿಯಲ್ಲಿ ಇಮಾಮತ ಕೆಲಸ ಮಾಡುತ್ತಿದ್ದ ಯುವಕ, ಶುಕ್ರವಾರ ಬೆಳಿಗ್ಗೆ ತಾನು ವಾಸಿಸುತ್ತಿದ್ದ ಕೋಣೆಯಲ್ಲಿ ನೀರು ಕಾಯಿಸಲು ವಿದ್ಯುತ್ ಸ್ವಿಚ್ ಗೆ ಕ್ವಾಯಿಲ್ ಹಾಕಿ ಕೈಯಲ್ಲಿ ಹಿಡಿದುಕೊಂಡಾಗ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾನೆ. ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

