ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ ಜನ ಏಳು ಜನ ಶಾಸಕರನ್ನು ನೀಡಿದ್ದಾರೆ, ಹೀಗಾಗಿ ಈ ಭಾಗದಲ್ಲಿ ಇನ್ನೂ ಶೈಕ್ಷಣಿ, ಆರೋಗ್ಯ ಕ್ಷೇತ್ರದಲ್ಲಿ ಇನ್ನೂ ಅಭಿವೃದ್ಧಿ ಕಾರ್ಯಗಳು ಆಗಬೇಕಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಭಿಪ್ರಾಯಪಟ್ಟರು.
ಕಲ್ಯಾಣ ಕರ್ನಾಟಕ ಭಾಗದ ಕೇಂದ್ರವಾದ ಕಲಬುರಗಿಯಲ್ಲಿ KKRDB ವತಿಯಿಂದ ರೂ. 327.17 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ 371 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆಯನ್ನು ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಒಂದು ನಿಮಾನ್ಸ್ ಆಸ್ಪತ್ರೆಯ ಶಾಖೆ ಮತ್ತು ಡಯಾಮೆಟಾಲಜಿ ಬ್ರ್ಯಾಂಚ್ ಸ್ಥಾಪಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಖರ್ಗೆ ಅವರು ಮನವಿ ಮಾಡಿದರು. ನಿಮಾನ್ಸ್ ಈ ಭಾಗದಲ್ಲಿ ಸ್ಥಾಪನೆಯಾದರೆ ಜನ ಬೆಂಗಳೂರಿಗೆ ಹೋಗುವುದು ತಪ್ಪುತ್ತದೆ. ಅಲ್ಲದೇ ಖರ್ಚೂ ಕೂಡ ಕಡಿಮೆಯಾಗುತ್ತದೆ. ಹೀಗಾಗಿ ಈ ಬೇಡಿಕೆಗಳನ್ನು ಈಡೇರಿಸುವ ಮೂಲಕ ಜನರಿಗೆ ನೆರವಾಗಬೇಕು ಎಂದರು.
ಕಲಬುರಗಿ ವಿವಿಯಲ್ಲಿ ಸಂಶೋಧನೆ ಮಾಡುವ ವ್ಯವಸ್ಥೆ ಇಲ್ಲ, ಕಟ್ಟಡ ಕುಸಿತದ ಹಂತದಲ್ಲಿವೆ, ವಿದ್ಯಾರ್ಥಿಗಳಿಗೆ ಬೋಧಿಸುವ ಶಿಕ್ಷಕರ ಕೊರತೆ ಇದೆ. ಕಟ್ಟಡ ನವೀಕರಣವನ್ನು ಮೈಸೂರು ವಿವಿಯಂತೆಯೇ ಮಾಡಲು ಅನುದಾನು ನೀಡಿ ವಿವಿ ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.
ಈ ಭಾಗಕ್ಕೆ 371 (ಜೆ) ಮಾಡಿಸಲು ನಾವೇಷ್ಟು ಕಷ್ಟಪಟ್ಟಿದ್ದೇವೆ ಅಂತಾ ಗೊತ್ತಿದೆ. ಆದ್ದರಿಂದ ಇನ್ನೂ ಅಭಿವೃದ್ಧಿಗೆ ಈ ಭಾಗದ ಯುವಕರು, ನಾಯಕರು ಮುತುವರ್ಜಿ ವಹಿಸಿ ಸರ್ಕಾರದ ಬೆನ್ನು ಬಿದ್ದು ಅಭಿವೃದ್ಧಿ ಕೆಲಸ ಮಾಡಿಸಬೇಕು. ನಾವು ಹಿಂದುಳಿದಿದ್ದೇವೆ ಎಂದು ಹೇಳುತಾ ಸುಮ್ಮನೇ ಕೂರಬೇಡಿ ಎಂದೂ ಖರ್ಗೆ ಅವರು ಸಲಹೆ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

