ಹುಬ್ಬಳ್ಳಿ: ಉಪಚುನಾವಣೆಗೆ ಬಹಳಷ್ಟು ತಯಾರಿ ಮಾಡಿದ್ದೇವೆ. ಮೂರು ಕ್ಷೇತ್ರದಲ್ಲಿ ಜನ ಆಶೀರ್ವಾದ ಮಾಡ್ತಾರೆ. ಕುಮಾರಸ್ವಾಮಿ ಅವರ ಭಾವನಾತ್ಮಕವಾಗಿ ಮಾತನಾಡೋದು ಅಳೋದನ್ನ ನೋಡಿ ಜನರಿಗೆ ಸಾಕಾಗಿದೆ. ಇದನ್ನೆಲ್ಲ ಜನ ನೋಡಲ್ಲ, ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಕುರಿತು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಶಿಗ್ಗಾವಿಯಲ್ಲಿ ಬಂಡಾಯವಾಗಿ ಅಜ್ಜಂಪೀರ್ ಖಾದ್ರಿ ನಾಮಪತ್ರ ಸಲ್ಲಿಸಿದ್ದಾರೆ. ಪಠಾಣ್ ಅವರಿಗೆ ಈಗಾಗಲೇ ಟಿಕೆಟ್ ಕೊಟ್ಟಿದ್ದೇವೆ. ಇಬ್ಬರಿಗೆ ಕೊಡಲು ಆಗುವುದಿಲ್ಲ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

