Breaking News

ಚಂದ್ರಯಾನ-3 ಯಶಸ್ವಿ ಉಡಾವಣೆ

ನವದಹಲಿ ಪ್ರಜಾಕಿರಣ.ಕಾಮ್ : ಭಾರತದ ಹೆಮ್ಮೆಯ ಪ್ರತೀಕವಾದ ಚಂದ್ರಯಾನ-3 ಇಂದು ಶುಕ್ರವಾರ ಅಪರಾಹ್ನ 2.35ಗಂಟೆಗೆ ಆಂಧ್ರದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ -3ರ ಚಾಲನೆ ಯಶಸ್ವಿ ಆಯಿತು.

ದೇಶದ ಜನರ ನಿರೀಕ್ಷೆಯಂತೆ ಈ ಬಾರಿ ಇಸ್ರೋ ಗೆದ್ದಿದೆ. ಚಂದ್ರಯಾನ -3 ಯಶಸ್ವಿಯಾಗಿ
ಉಡಾವಣೆಯಾಗಿದೆ.ಆ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಮುಗಿಲೆತ್ತರಕ್ಕೆ ಏರಿದೆ.

ನಮ್ಮ ಹೆಮ್ಮೆಯ ಇಸ್ರೋ ಇನ್ನೊಂದು ಐತಿಹಾಸಿಕ ಮೈಲುಗಲ್ಲು ಸ್ಥಾಪಿಸಿದೆ. ಸಮಸ್ತ ಭಾರತೀಯರ ಬಹು ನಿರೀಕ್ಷಿತ ಬಾಹ್ಯಾಕಾಶ ಯೋಜನೆ ಚಂದ್ರಯಾನ-3 ಉಡ್ಡಯನದ ಕ್ಷಣವನ್ನು ಜನ ಕಾತರದಿಂದ ನೋಡಿ ಕಣ್ಣು ತುಂಬಿಸಿಕೊಂಡರು

ಈ ಅಭೂತಪೂರ್ವ ಯಶಸ್ಸಿಗೆ ಕಾರಣರಾದ ಇಸ್ರೋ ದ ಎಲ್ಲಾ ದ ಹೆಮ್ಮೆಯ ವಿಜ್ಞಾನಿಗಳಿಗೆ
ಚಂದ್ರಯಾನ -3 ಯೋಜನೆಗಾಗಿ ಹಗಲಿರುಳು ಶ್ರಮಿಸಿರುವ ಎಲ್ಲಾ ತಾಂತ್ರಿಕ ನಿಪುಣರು ಸೇರಿ ಪ್ರತಿಯೊಬ್ಬರಿಗೂಶುಭಾಶಯಗಳಮಹಾಪೂರವೇ ಹರಿದುಬರುತ್ತಿದೆ

Share News

About BigTv News

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *