ಹುಬ್ಬಳ್ಳಿ: ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಪೊಲೀಸರಿಂದ ಮೂರು ಜನ ಮನೆ ಕಳ್ಳರ ಬಂಧನ ಮಾಡುವುಲ್ಲಿ ಯಶಸ್ವಿಯಾಗಿದ್ದಾರೆ. 05 ಗ್ರಾಂ ಚಿನ್ನ, 200 ಗ್ರಾಂ ಬೆಳ್ಳಿ, ಒಂದು ಮೊಬೈಲ ಪೋನ ಹಾಗೂ ನಗದು ಹಣ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ಯುನುಸ್ ಅಬ್ದುಲ ಖಾದರ ಖಾಜಿ,ಸಿದ್ದಪ್ಪ ಯಮನಪ್ಪ ವಾಲ್ಮೀಕಿ, ಉಮೇಶ ಲಕ್ಷ್ಮಣ ಕೂಲಿ ನಾಗರಾಜ ಬಾಚಣಕಿ ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇತ್ತೀಚೆಗೆ ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯ ಆನಂದನಗರ ಘೋಡ್ಡೆ ಪ್ಲಾಟ ಮತ್ತು ಹೆಗ್ಗೇರಿ ಆಯುರ್ವೆದಿಕ ಆಸ್ಪತ್ರೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಪ್ರಕರಣಗಳು ದಾಖಲಾಗಿದ್ದವು. ಮಾನ್ಯ ಪೊಲೀಸ್ ಆಯುಕ್ತರು ಹು-ಧಾ. ಮಾನ್ಯ ಉಪ ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು ಹಾಗೂ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು ದಕ್ಷಿಣ ಉಪ ವಿಭಾಗ ಹುಬ್ಬಳ್ಳಿ ರವರ ಮಾರ್ಗದರ್ಶನದಲ್ಲಿ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ರವರಾದ ಎಸ್.ಎಚ್.ಯಳ್ಳೂರ ರವರ ನೇತೃತ್ವದಲ್ಲಿ ಕೆ. ವಿ. ಬಂಡಿಯವರ ಹಾಗೂ ಸಿಬ್ಬಂದಿ ಜನರು ಆರೋಪಿತರಿಗೆ ಪತ್ತೆ ಹಚ್ಚಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

