ಬೆಂಗಳೂರು: ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ (ಪಿಎಸ್‌ಜಿಎಂಬಿವೈ)ಯಡಿ ಮನೆ ಚಾವಣಿ ಮೇಲೆ ಸೌರ ಫಲಕ ಅಳವಡಿಸಿಕೊಂಡ ಫಲಾನುಭವಿಗಳಿಗೆ ಉತ್ತೇಜಿಸಲು ಕೇಂದ್ರ ಸರ್ಕಾರ ಇನ್ನೊಂದು ದಿಟ್ಟ ಹೆಜ್ಜೆಯಿಡುತ್ತಿದೆ.
ಸೂರಿನ ಮೇಲೆ ಸೌರಶಕ್ತಿಯಿಂದ ಉತ್ಪಾದಿತ ಮನೆಗೆ ಬಳಸಿಕೊಂಡ ನಂತರವೂ ಹೆಚ್ಚುವರಿಯಾಗಿ ಲಭ್ಯ ವಿದ್ಯುತ್‌ನ್ನು ಎಸ್ಕಾಂಗಳು ಖರೀದಿಸುವುದು ಶೀಘ್ರ ಕಡ್ಡಾಯವಾಗಲಿದೆ. ಇದಕ್ಕಾಗಿ ಅಧಿಕಾರಿ ವರ್ಗದಮಟ್ಟದಲ್ಲಿ ಚರ್ಚೆಗಳು ನಡೆದಿವೆ.
ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಲು ಸಂಬಂಧಿಸಿದ ಕಾಯ್ದೆಗೆ ತಿದ್ದುಪಡಿ ಕರಡು ಸಿದ್ಧವಾಗುತ್ತಿದೆ. ಇಷ್ಟರಲ್ಲೇ ಅಂತಿಮವಾಗಲಿದೆ ಎಂದು ಕೇಂದ್ರ ಹೊಸ, ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದರು.
ಸ್ಥಳೀಯ ಖಾಸಗಿ ಹೋಟೆಲ್‌ನಲ್ಲಿ ರಾಜ್ಯದ ನವೀಕರಿಸಬಹುದಾದ ಇಂಧನ ಉತ್ಪಾದಕರ ಸಂಘ ಮತ್ತು ಬಿಜೆಪಿ ವಾಣಿಜ್ಯ-ವ್ಯಾಪಾರ ಪ್ರಕೋಷ್ಠ ಜಂಟಿಯಾಗಿ ಪಿಎಸ್‌ಜಿಎಂಬಿವೈ ಜಾಗೃತಿ ಮತ್ತು ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

