ಚಾಮರಾಜನಗರ: ಕಾಂಗ್ರೆಸ್‌ನವರು ನನ್ನನ್ನು ಸೋಲಿಸಲಿಲ್ಲ, ಬಿಜೆಪಿ ಅವರೇ ನನ್ನನ್ನು ಸೋಲಿಸಿದರು ಎಂದು ಮಾಜಿ ಸಚಿವ ವಿ.ಸೋಮಣ್ಣ ಅವರು ಚಾಮರಾಜನಗರದಲ್ಲಿ ಬೇಸರ ಹೊರಹಾಕಿದರು. ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಗ್ರಾನೈಟ್ ಕಂಪನಿ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನನ್ನನ್ನು ಕಾಂಗ್ರೆಸ್‌ನವರು ಸೋಲಿಸಲಿಲ್ಲ, ಬಿಜೆಪಿ ಅವರೇ ನನ್ನನ್ನು ಸೋಲಿಸಿದ್ದು. ನನ್ನ ಸಮುದಾಯದವರೇ ನನ್ನನ್ನು ಸೋಲಿಸಿದ್ದು, ಅವರಿಗೆ ಒಳ್ಳೆಯದಾಗಲಿ, ನಾನು ಮತ್ತಷ್ಟು ಶಕ್ತಿವಂತನಾಗಿದ್ದೇನೆ ಎಂದು ಯಾರಾ ಹೆಸರು ಹೇಳದೇ ಕಿಡಿಕಾರಿದರು.
ನಾನು ಉಸ್ತುವಾರಿ ಸಚಿವರಾಗಿದ್ದ ವೇಳೆ ಗಣಿ ಮಾಲೀಕರು ನನ್ನ ಮನೆಗೆ ಮೂಟೆಗಟ್ಟಲೇ ಹಣ ತಂದಿದ್ದರು. ನನಗೇನು ನಿಮ್ಮ ದುಡ್ಡು ಬೇಡ, ನೀವು ಗಣಿಗಾರಿಕೆ ನಡೆಸುವ ಊರಿನ ಶಾಲೆಗಳಿಗೆ, ರಸ್ತೆಗಳಿಗೆ ಈ ಹಣ ವಿನಿಯೋಗಿಸಿ ಎಂದು ವಾಪಾಸ್ ಕಳುಹಿಸಿದ್ದೆ ಎಂದರು. ಇನ್ನು ಸಿಕ್ಕ ಕಡಿಮೆ ಅವಕಾಶದಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ಜೀವನದಲ್ಲಿ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಬೇಕು, ಕೆರೆಗೆ ನೀರು ತುಂಬುವ ಯೋಜನೆ ಮಾಡುವಾಗ ನನ್ನನ್ನು ಹುಚ್ಚ ಎಂದರು. ಆದರೆ ಈಗ ನನ್ನ ಕೆಲಸ ನೆನಪಾಗುತ್ತದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





