Breaking News

ಚರ್ಮಕಾರರಿಗೆ ಪ್ರತ್ಯೇಕ ಒಳಮೀಸಲಾತಿ ಸೇರಿ ಎಲ್ಲಾ ಸವಲತ್ತುಗಳನ್ನು ನೀಡುವಂತೆ ಒತ್ತಾಯ

ಹುಬ್ಬಳ್ಳಿ : ಕರ್ನಾಟಕ ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯವಾಗಿ, ಚರ್ಮಕಾರರಿಗೆ ಅವರ ಜನಸಂಖ್ಯೆಯ ಅನುಸಾರವಾಗಿ ಪ್ರತ್ಯೇಕ ಒಳಮೀಸಲಾತಿ ಸೇರಿ ಎಲ್ಲಾ ಸವಲತ್ತುಗಳನ್ನು ನೀಡಬೇಕೆಂದು ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ) ಹರಳಯ್ಯ ಸಂಘ ಒತ್ತಾಯಿಸುತ್ತದೆಂದು ಮಹಾಮಂಡಳದ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಹೇಳಿದರು.

ಇನ್ನು ಮೂಲ ಚರ್ಮಕಾರರ ಸುಮಾರು 15 ಲಕ್ಷ ಜನಸಂಖ್ಯೆ ಇರುವ ಈ 18 ಕ್ಕೂ ಹೆಚ್ಚಿನ ಚಮ್ಮಾರ ಸಮಗಾರ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಬೇಕು. ಚರ್ಮಕಾರ ಸುಮಾರು 18 ಸಮುದಾಯಗಳನ್ನು ತಕ್ಷಣ ಮಾದಿಗ ಜಾತಿಗಳ ಪಟ್ಟಿಯಿಂದ ಪ್ರತ್ಯೇಕಿಸಬೇಕು, ಸಮುದಾಯದ ಸಮಗ್ರ ಏಳೆಗಾಗಿ ಒಂದು ಪ್ರತ್ಯೇಕ ನಿಗಮ ಮಂಡಳಿಯನ್ನು ಸ್ಥಾಪಿಸಬೇಕು ಇಲ್ಲವೇ ಡಾ. ಬಾಬುಜಗಜೀವನ್ ರಾಮ್ ಚರ್ಮಕೈಗಾರಿಕಾ ಅಭಿವೃದ್ಧಿ ನಿಗಮವನ್ನು ಕಡ್ಡಾಯವಾಗಿ ಚಮ್ಮಾರ ಸಮಗಾರ ಸಮಾಜಕ್ಕೆ ಪ್ರತ್ಯೇಕಿಸಬೇಕೆಂದು ಒತ್ತಾಯಿಸಿದರು.

Share News

About Shaikh BigTv

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *