ಕುಂದಗೋಳ : ಅತಿವೃಷ್ಟಿ ಪರಿಣಾಮ ಹಾನಿಯಾದ ರೈತರ ಬೆಳೆಗಳಿಗೆ ಪರಿಹಾರ ಮತ್ತು ಮಳೆಯಿಂದ ಬಿದ್ದಂತಹ ಮನೆಗಳಿಗೆ 5 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿ ರತ್ನ ಭಾರತ ರೈತ ಸಮಾಜದವರು ಹುಬ್ಬಳ್ಳಿ ಲಕ್ಷ್ಮೀಶ್ವರ ರಸ್ತೆ ತಡೆ ನಡೆಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಗಾಳಿ ಮರೇಮ್ಮದೇವಿ ದೇವಸ್ಥಾನದ ಬಳಿ ಹುಬ್ಬಳ್ಳಿ ಲಕ್ಷ್ಮೀಶ್ವರ ರಾಜ್ಯ ಹೆದ್ದಾರಿಯನ್ನು ತಡೆದು ಪಾದಯಾತ್ರೆ ಮೂಲಕ ತಹಶೀಲ್ದಾರ್ ಕಚೇರಿ ಆಗಮಿಸಿದ ರತ್ನ ಭಾರತ ರೈತ ಸಮಾಜದವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಸರ್ಕಾರ ಉಪಚುನಾವಣೆಯಲ್ಲಿ ಬ್ಯುಸಿ ಇದೆ, ಅತಿವೃಷ್ಟಿ ಸಂಕಷ್ಟಕ್ಕೆ ಸ್ಪಂದನೆ ನೀಡುತ್ತಿಲ್ಲ, ಹೀಗೆ ಮುಂದುವರೆದರೆ ಡಿಸೆಂಬರ್ ತಿಂಗಳು ನಡೆಯುವ ಅಧಿವೇಶನದಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಬಾರುಕೋಲು ರುಚಿ ತೋರಿಸಬೇಕಾಗುತ್ತದೆ ಎಂದರು.
ಬಳಿಕ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ಬೆಣ್ಣೆ ಹಳ್ಳ ಸೇರಿದಂತೆ ಪ್ರತಿ ಹಳ್ಳಿಗಳನ್ನು ಹೂಳೆತ್ತಿ ಹಾಳಾದ ರಸ್ತೆಗಳನ್ನು, ಬ್ರಿಡ್ಜ್’ಗಳನ್ನು ಸರಿಪಡಿಸಿ ಎಂದು ಅಹವಾಲು ಇಟ್ಟರು.
ಈ ಸಂದರ್ಭದಲ್ಲಿ ರತ್ನ ಭಾರತ ರೈತ ಸಮಾಜದವರು ಹಾಗೂ ರೈತಾಪಿ ಜನರು ಪಾಲ್ಗೊಂಡಿದ್ದರು. ರಸ್ತೆ ತಡೆ ವೇಳೆ ವಾಹನ ಸವಾರರು ಪರದಾಟ ನಡೆಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

