Breaking News

ಮಳೆಯಿಂದ ಹಾನಿಯಾದ ಕಾಮಗಾರಿಯನ್ನು ಪರಿಶೀಲಿಸಿದ ಸತೀಶ್ ಜಾರಕಿಹೊಳಿ

ಕುಂದಗೋಳ : ಅತಿವೃಷ್ಟಿ ಪರಿಣಾಮ ಕುಂದಗೋಳ ತಾಲೂಕಿನಲ್ಲಿ ಹಾನಿಯಾದ ಲೋಕೋಪಯೋಗಿ ಇಲಾಖೆ ಕಾಮಗಾರಿಗಳನ್ನು ಸಚಿವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಪರಿಶೀಲಿಸಿ ಪರಿಹಾರ ಭರವಸೆ ನೀಡಿದ್ದಾರೆ.

ಕುಂದಗೋಳ ತಾಲೂಕಿನಲ್ಲಿ ಭೀಕರ ಮಳೆಯ ಅನಾಹುಕ್ಕೆ ರೈತಾಪಿ ಜನರ ಬೆಳೆಗಳು ಸಂಪೂರ್ಣ ಹಾಳಾಗಿವೆ, ಅದರಂತೆ ಪ್ರವಾಹದ ಸೆಳೆತಕ್ಕೆ ರಸ್ತೆ ಬ್ರಿಡ್ಜ್ ಕೊಚ್ಚಿಕೊಂಡು ಸಂಚಾರಕ್ಕೆ ಸಮಸ್ಯೆಯಾಗಿದೆ.

ಈ ಹಿನ್ನೆಲೆಯಲ್ಲಿ ಕುಂದಗೋಳ ಮಾರ್ಗವಾಗಿ ಹುಬ್ಬಳ್ಳಿಗೆ ಪ್ರಮಾಣ ಬೆಳೆಸುತ್ತಿದ್ದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರನ್ನೂ ಕಾಂಗ್ರೆಸ್‌ ಮುಖಂಡರು ಕುಂದಗೋಳ ಪ್ರವಾಸಿ ಮಂದಿರದಲ್ಲಿ ಭೇಟಿಯಾಗಿ ಸಮಸ್ಯೆ ವಿವರಿಸಿದ್ದಾರೆ.

ಈ ವೇಳೆ ಸ್ವತಃ ಲೋಕೋಪಯೋಗಿ ಸಚಿವ ಸಂಶಿ ಅತ್ತಿಗೇರಿ ಮಾರ್ಗ ಮಧ್ಯೆ ಕಾಲುವೆಗೆ ಕೊಚ್ಚಿ ಹೋದ ರಸ್ತೆ ಮತ್ತು ಬ್ರಿಡ್ಜ್ ವೀಕ್ಷಣೆ ಮಾಡಿ ಸೂಕ್ತ ಕಾಮಗಾರಿ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಇನ್ನೂ ಕುಂದಗೋಳ ಪಟ್ಟಣಕ್ಕೆ ಭೇಟಿ ನೀಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಅನೇಕ ರೈತಾಪಿ ಸಂಘಟನೆಗಳು ಬೆಳೆ ಹಾನಿಗೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದರು.

Share News

About Shaikh BigTv

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *