Breaking News

ಟ್ರ್ಯಾಕ್ಟ‌ರ್ ಮೇಲೆ ಹತ್ತಿ ಆಟ ಆಡುತ್ತಿದ್ದ ಬಾಲಕ ಸಾವು

ನವಲಗುಂದ : ದೀಪಾವಳಿ ಹಬ್ಬದ ಪ್ರಯುಕ್ತ
ಮನೆಯಲ್ಲಿ ವಾಹನ ಪೂಜೆಗೆಂದು ಟ್ರ್ಯಾಕ್ಟರನ್ನು ತಯಾರಿ ಮಾಡುತ್ತಿರುವಾಗ ಟ್ರ್ಯಾಕ್ಟ‌ರ್ ಮೇಲೆ ಹತ್ತಿ ಆಟ ಆಡುತ್ತಿರುವಾಗ ಆಕಸ್ಮಿಕವಾಗಿ ಮೂರು ವರ್ಷದ ಬಾಲಕ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ಸಾವನ್ನಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಣ್ಣಿಗೇರಿ ತಾಲೂಕಿನ ನಾವಳ್ಳಿ ಗ್ರಾಮದ ಅಗಸ್ಯ ಪ್ರವೀಣ ಮಣಕವಾಡ(3) ಈತನು ಶುಕ್ರವಾರದಂದು ದೀಪಾವಳಿ ಹಬ್ಬಕ್ಕಾಗಿ ಟ್ರ್ಯಾಕ್ಟರನ್ನು ಶೃಂಗರಿಸುವ ವೇಳೆ ಆಕಸ್ಮಿಕವಾಗಿ ಟ್ರ್ಯಾಕ್ಟರ್‌ನಿಂದ ಕೆಳಗೆ ಬಿದ್ದು ತಲೆಯ ಎಡಭಾಗದಲ್ಲಿ ಭಾರಿ ಪೆಟ್ಟಾಗಿತ್ತು. ನಂತರ ಚಿಕಿತ್ಸೆಗಾಗಿ ನವಲಗುಂದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗವ ವೇಳೆ ಮಾರ್ಗ ಮಧ್ಯದಲ್ಲಿ ಬಾಲಕ ಮೃತ ಪಟ್ಟಿದ್ದಾನೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

ಇನ್ನು ಪ್ರಕರಣವನ್ನು ಅಣ್ಣಿಗೇರಿ ಪೊಲೀಸ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಎಸ್.ಜಿ.ಆಲದಕಟ್ಟಿ, ಸಿಪಿಐ ರವಿಕುಮಾರ ಕಪ್ಪತನವರ ಭೆಟಿ ನೀಡಿದ್ದಾರೆ.

Share News

About Shaikh BigTv

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *