ಭಾರತದ ವೇಗದ ಬೌಲರ್ ನವ್‌ದೀಪ್ ಸೈನಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೈರ್ಯಾಣದಲ್ಲಿ ಹುಟ್ಟಿ ಬೆಳೆದಿರುವ ಅವರು 2019ರಲ್ಲಿ ಭಾರತ ತಂಡದ ಪರವಾಗಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದೀಗ ಅವರು ತಮ್ಮ 30ನೇ ಹರೆಯದಲ್ಲಿ ಸುದೀರ್ಘ ಕಾಲದ ಗೆಳತಿ ಸ್ವಾತಿ ಅಸ್ಥಾನ ಜೊತೆಗೆ ವೂವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವುದನ್ನು ಸ್ವತಃ ನವ್‌ದೀಪ್ ಸೈನಿ ಇನ್‌ಸ್ಟಾಗ್ರಾಂ ಪೋಸ್ಟ್ ಪೂಲಕ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. “ನಿನ್ನ ಜೊತೆಗೆ ಪ್ರತಿ ದಿನವೂ ಪ್ರೀತಿಯ ದಿನ. ಇಂದು ನಾವು ಎಂದೆಂದಿಗೂ ಜೊತೆಯಾಗಿರಲು ನಿರ್ಧರಿಸಿದ್ದೇವೆ. ನಿಮ್ಮೆಲ್ಲರ ಆಶಿರ್ವಾದ ಬಯಸುತ್ತಿದ್ದೇನೆ. ನಮ್ಮ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ” ಎಂದು ನವ್‌ದೀಪ್ ಸೈನಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





