Breaking News

ದೇಶದಲ್ಲಿ ಹೊಸದಾಗಿ 500 ಎಸ್ ಬಿ ಐ ಶಾಖೆಗಳ ಪ್ರಾರಂಭ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಮುಂಬೈ: 2024-25ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಹೊಸದಾಗಿ 500 ಶಾಖೆಗಳನ್ನು ಪ್ರಾರಂಭಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.
1921ರಲ್ಲಿ ಬ್ಯಾಂಕ್‌ 250 ಶಾಖೆಗಳನ್ನು ಹೊಂದಿತ್ತು, ಅದು ಈಗ 22,500ಕ್ಕೆ ಏರಿಕೆಯಾಗಿದೆ. ಹೊಸ ಶಾಖೆಗಳ ಸೇರ್ಪಡೆಯೊಂದಿಗೆ ಶಾಖೆಗಳ ಸಂಖ್ಯೆ 23 ಸಾವಿರಕ್ಕೆ ತಲುಪಲಿದೆ ಎಂದು ಬ್ಯಾಂಕ್‌ನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಹೇಳಿದರು.
ಎಸ್‌ಬಿಐನ ಈ ಬೆಳವಣಿಗೆಯು ಜಾಗತಿಕ ದಾಖಲೆ, ದೇಶದಲ್ಲಿನ ಒಟ್ಟು ಠೇವಣಿ ಪ್ರಮಾಣದಲ್ಲಿ ಶೇ 22ರಷ್ಟು ಎಸ್‌ಬಿಐ ಹೊಂದಿದ್ದು, 50 ಕೋಟಿಗೂ ಹೆಚ್ಚು ಗ್ರಾಹಕರಿಗೆ ಸೇವೆ ನೀಡಲಾಗುತ್ತಿದೆ. ಬ್ಯಾಂಕ್‌ ಪ್ರತಿ ದಿನ 20 ಕೋಟಿ ಯುಪಿಐ ವಹಿವಾಟು ನಿಭಾಯಿಸುತ್ತಿದೆ ಎಂದು ಹೇಳಿದರು.
ಶತಮಾನೋತ್ಸವದ ಪ್ರಯುಕ್ತ ₹100 ಮುಖಬೆಲೆಯ ನಾಣ್ಯಗಳನ್ನು ಸಚಿವರು ಇದೇ ವೇಳೆ ಬಿಡುಗಡೆ ಮಾಡಿದರು. ದೇಶದಲ್ಲಿ ಶತಮಾನ ಪೂರೈಸಿದ 43 ಎಸ್‌ಬಿಐ ಶಾಖೆಗಳಿವೆ. 1981 ಮತ್ತು 1996ರ ನಡುವಿನ ಬ್ಯಾಂಕಿನ ಇತಿಹಾಸವನ್ನು ದಾಖಲಿಸುವ ಸಂಪುಟವನ್ನು ಸಹ ಬಿಡುಗಡೆ ಮಾಡಿದರು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *