ಬೆಂಗಳೂರು: ಎಸ್‌ಸಿ, ಎಸ್‌ಟಿ ವಿಷಯಗಳು, ಪ್ರಶ್ನೆಗಳಿಗೆ ಅದೇ ಸಮುದಾಯದ ರಾಜಕೀಯ ಮುಖಂಡರೇ ಉತ್ತರಿಸಬೇಕೆಂದಿಲ್ಲ. ಪಕ್ಷದ ಎಲ್ಲ ಮುಖಂಡರು ಹೊಣೆಗಾರಿಕೆಯಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ಸಲಹೆ ನೀಡಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಏರ್ಪಡಿಸಿದ್ದ ಸಂವಿಧಾನ ಸನ್ಮಾನ ಅಭಿಯಾನ ರಾಜ್ಯಮಟ್ಟದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂವಿಧಾನವೆಂದರೆ ಎಸ್‌ಸಿ, ಎಸ್‌ಟಿಗೆ ಮಾತ್ರ ಸೀಮಿತವಾದದ್ದು ಎಂದು ಕಾಂಗ್ರೆಸ್ ಬಿಂಬಿಸುತ್ತಾ ಬಂದಿದ್ದು ಅದೇ ತಪ್ಪು ನಮ್ಮ ಪಕ್ಷದಿಂದಾಗಬಾರದು ಎಂದರು.
ಎಸ್‌ಸಿ, ಎಸ್‌ಟಿ ವಿಷಯಗಳಿಗೆ ಸಮುದಾಯದ ಬೇಧವಿಲ್ಲದರೆ ಮುತುವರ್ಜಿ ತೋರಿಸಿದರೆ ಬಹು ಬೇಗ ವಿಶ್ವಾಸ ಗಳಿಸಬಹುದು. ಇದರಿಂದಾಗಿ ಬಿಜೆಪಿ ಬಗ್ಗೆ ಎಸ್‌ಸಿ, ಎಸ್‌ಟಿ ಸಮುದಾಯದಲ್ಲಿ ವಿರೋಧಿಗಳು ತುಂಬಿರುವ ಪೂರ್ವಾಗ್ರಹ, ತಪ್ಪು ಅಭಿಪ್ರಾಯ ಹೋಗಲಾಡಿಸಲು ಸಾಧ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ವಿ.ಸುನಿಲ್ ಕುಮಾರ್, ಎನ್.ರವಿಕುಮಾರ್, ಸಿ.ಟಿ.ರವಿ, ಸಿಮೆಂಟ್ ಮಂಜುನಾಥ್, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಉಪಾಧ್ಯಕ್ಷರಾದ ಎನ್.ಮಹೇಶ್, ಮಾಳವಿಕಾ ಅವಿನಾಶ್ ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





