Breaking News

₹500 ಸಾಲದ ಗಲಾಟೆಗೆ ರಕ್ತಪಾತ: ಕಲ್ಲಿನಿಂದ ಹೊಡೆದು ಆಟೋ ಚಾಲಕ ಈರಣ್ಣ ಕೊಲೆ..


ಹುಬ್ಬಳ್ಳಿಯಲ್ಲಿ ಐನೂರು ರೂಪಾಯಿ ವಿಚಾರಕ್ಕೆ ಕೊಲೆ: ಕಿಮ್ಸ್‌ನಲ್ಲಿ ಚಿಕಿತ್ಸೆ ಫಲಿಸದೇ ಈರಣ್ಣ ಸಾವು

Hubballi ಹುಬ್ಬಳ್ಳಿಯಲ್ಲಿ ಕೇವಲ ₹500 ಸಾಲದ ವಿಚಾರಕ್ಕೆ ಶುರುವಾದ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಬೆಚ್ಚಿಬೀಳಿಸಿದೆ. ಯಲ್ಲಾಪುರ ಓಣಿಯ ನಿವಾಸಿ ಹಾಗೂ ಆಟೋ ಚಾಲಕರಾಗಿದ್ದ ಈರಣ್ಣ ಹುರಕಡ್ಲಿ (45) ಅವರು ಶಶಿಧರ್ ಬಳಿ ₹500 ಸಾಲ ಪಡೆದಿದ್ದರು ಎನ್ನಲಾಗಿದೆ…

ಜೂನ್ 25ರಂದು ನಗರದ ಹೊರವಲಯದಲ್ಲಿ ಹಣದ ವಿಚಾರವಾಗಿ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಕೋಪಗೊಂಡ ಶಶಿಧರ್ ಕಲ್ಲಿನಿಂದ ಈರಣ್ಣ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಈರಣ್ಣರನ್ನು ತಕ್ಷಣ Karnataka Institute of Medical Sciences ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು…

ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ಈರಣ್ಣ ಮೃತಪಟ್ಟಿದ್ದಾರೆ. ಘಟನೆ ಸಂಬಂಧ Bendigeri Police Station ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶಶಿಧರ್‌ನನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ..

ಕೇವಲ ಐನೂರು ರೂಪಾಯಿ ಸಾಲದ ವಿಚಾರವೇ ಒಬ್ಬರ ಪ್ರಾಣ ಕಸಿದಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

Share News

About Shaikh BigTv

Check Also

ಕೊಲ್ಲೂರಿನಲ್ಲಿ 80 ಸಾವಿರ ರೂ. ಕಳವು: 24 ಗಂಟೆಯೊಳಗೆ ಮೂವರು ಕಳ್ಳಿಯರ ಬಂಧನ

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯ ವ್ಯಾನಿಟಿ ಬ್ಯಾಗ್‌ನಿಂದ ₹80 ಸಾವಿರ ನಗದು ಕಳವು ಮಾಡಿದ ಪ್ರಕರಣವನ್ನು ಕೊಲ್ಲೂರು …

Leave a Reply

Your email address will not be published. Required fields are marked *