ಧಾರವಾಡ: ಬೆಳಗಾವಿಯ ಅಧಿವೇಶನದಲ್ಲಿ ವಕ್ಸ್ ವಿಚಾರದ ಬಗ್ಗೆ ಧ್ವನಿ ಎತ್ತುತ್ತೇವೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಇಂದು ರಾಜ್ಯದಾದ್ಯಂತ ವಕ್ಸ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದೆ. ನಮ್ಮ ಸಂಘಟನಾತ್ಮಕ 39 ಜಿಲ್ಲಾ ಘಟಕಗಳಿವೆ. ಎಲ್ಲಾ ಘಟಕಗಳಿಂದ ಪ್ರತಿಭಟನೆ ನಡೆದಿದೆ. ಲವ್ ಜಿಹಾದ್‌ನಂತೆಯೇ ಈಗ ಲ್ಯಾಂಡ್ ಜಿಹಾದ್ ನಡೆದಿದೆ. ಇದನ್ನು ಸಚಿವ ಜಮೀರ್ ಅಹ್ಮದ್ ಮಾಡಿದ್ದಾರೆ ಎಂದರು.
ವಕ್ಷ ವಿರುದ್ಧ ನಮ್ಮ ಪಕ್ಷ ಕಮಿಟಿ ಮಾಡಿತ್ತು. ವಿಜಯಪುರ ಜಿಲ್ಲೆಯಲ್ಲೇ 14 ಸಾವಿರ ಎಕರೆ ವಕ್ಸ್‌ಗೆ ಹೋಗುತ್ತಿತ್ತು. ಇದು ರಾಜ್ಯದಲ್ಲಿ ನಡೆದಿರುವ ಬಹುದೊಡ್ಡ ಹಗರಣ ಎಂದು ಗೊತ್ತಾಯಿತು. ಇದರ ಬಗ್ಗೆ ಬಿಜೆಪಿ ದೊಡ್ಡಮಟ್ಟದಲ್ಲೇ ಧ್ವನಿ ಎತ್ತಿದಾಗ ಎಚ್ಚೆತ್ತುಕೊಂಡ ಸರ್ಕಾರ ಯೂಟರ್ನ್ ಹೊಡೆದು ಗೆಜೆಟ್ ನೋಟಿಫಿಕೇಶನ್ ಮಾಡುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಆದರೆ, ಇನ್ನೂ ರೈತರ ಪಹಣಿ ಪತ್ರಿಕೆಯ ಕಾಲಂ ನಂಬರ್ 9 ಮತ್ತು 11 ರಲ್ಲಿ ನಮೂದಾಗಿರುವ ವಕ್ಸ್ ಆಸ್ತಿ ಎಂಬ ಹೆಸರು ಹೋಗಿಲ್ಲ. ಇದರ ವಿರುದ್ದ ನಾವು ನಿರಂತರ ಹೋರಾಟ ನಡೆಸುತ್ತೇವೆ. ಎಲ್ಲ ಪಹಣಿ ಪತ್ರಿಕೆಗಳೂ ಸರಿಯಾಗಬೇಕು.
bigtvnews | Hubli Dharwad News | Kannada News | Karnataka News Hubli News | News In Hubli | Local news





