Breaking News

ಜಗದೀಶ್ ಶೆಟ್ಟರ್ ವೈಫಲ್ಯ ಖಂಡಿಸಿ ವಿನೂತನ ಪ್ರತಿಭಟನೆ

ಹುಬ್ಬಳ್ಳಿ : ಮೂಲಭೂತ ಸೌಕರ್ಯ ಒದಗಿಸುವಲ್ಲಿ ಮಾಜಿ ಸಿಎಂ, ಮಾಜಿ ಸಚಿವ 6 ಬಾರಿ ಶಾಸಕರಾದ ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ವೈಫಲ್ಯ ಖಂಡಿಸಿ ವಿನೂತನವಾಗಿ ನಗರದಲ್ಲಿ ಪ್ರತಿಭಟನೆ ಮಾಡಲಾಯಿತು.

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರದ ವಾರ್ಡ್ ನಂಬರ್ 58 ರಲ್ಲಿ ಪ್ರತಿಷ್ಠಿತ ಓಂ ಹೋಟೆಲ್ ಎದುರುಗಡೆ ಕೇಕ್ ಕಾರ್ನರ್ ದಿಂದ ಸೈಂಟ್ ಮೈಕಲ್ ಸ್ಕೂಲ್ ಹತ್ತಿರದ ಹದಗೆಟ್ಟ ರಸ್ತೆ ಮೇಲೆ ರಂಗೋಲಿ ಹಾಕಿ ಸಾರ್ವಜನಿಕರಿಂದ ವಿನೂತನ ಪ್ರತಿಭಟನೆ ಮಾಡಲಾಯಿತು.

ಅಲ್ಲದೇ ಒಳಚರಂಡಿ ಕಾಮಗಾರಿ ಮಾಡಿ ಒಂದು ವರ್ಷ ಗತಿಸಿದರೂ ಹಲವಾರು ಅರ್ಜಿಗಳು ಶಾಸಕರಾದ ಶ್ರೀ ಜಗದೀಶ್ ಶೆಟ್ಟರ್ ಅವರಿಗೆ ಸಾರ್ವಜನಿಕರು ಮನವಿ ಮಾಡಿದರು ರಸ್ತೆ ದುರಸ್ತಿ ಕೈಗೊಳ್ಳುತ್ತಿಲ್ಲ ಎಂದು ಹುಬ್ಬಳ್ಳಿ ಧಾರವಾಡ ಜನ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ಕಾಂಗ್ರೆಸ್ ಮುಖಂಡರಾದ ಸಂತೋಷ ಚಲವಾದಿ, ಹೂವಪ್ಪ ದಾಯಿಗೋಡಿ, ಸ್ಥಳೀಯ ನಿವಾಸಿಗಳು ತೇಜರಾಜ್ ಜೈನ್, ಪ್ರೀತೇಶ ಪಾಲ್ಗೋಟ, ಸುರೇಶ ಗಾಂಧಿಮೂತ, ಅಶೋಕ ನರಗುಂದ ಇತರರು ಪಾಲ್ಗೊಂಡಿದ್ದರು.

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *