ಧಾರವಾಡ: ಸದ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಕಚ್ಚಾಟಕ್ಕೆ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಬೇಸರ ವ್ಯಕ್ತಡಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟರಿಂದ ಲಕ್ಷಾಂತರ ಜನ ಕಾರ್ಯಕರ್ತರಿಗೆ ಬೇಸರ ಉಂಟಾಗಿದೆ. ಬಿಜೆಪಿಗಾಗಿ ಹಗಲು, ರಾತ್ರಿ ಲಕ್ಷಾಂತರ ಜನ ಕಾರ್ಯಕರ್ತರು ದುಡಿದಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಬಹಳ ವರ್ಷಗಳಿಂದ ದುಡಿದಿದ್ದಾರೆ. ಪಕ್ಷದ ಸಂಸ್ಥಾಪಕ ಶಾಮ ಪ್ರಸಾದ್ ಮುಖರ್ಜಿ ದೇಶಕ್ಕಾಗಿ ಜೀವ ಕಳೆದುಕೊಂಡಿದ್ದಾರೆ. ಅವರು ಆರ್ಟಿಕಲ್ 370 ವಿರುದ್ಧ ಹೋರಾಡಿದ್ದರು.
ದೀನದಯಾಳ ಉಪಾಧ್ಯಾಯ ಅವರ ಕೊಲೆ ಆಯಿತು. ಅವರು ಕೂಡ ದೇಶಕ್ಕಾಗಿ ಪ್ರಾಣ ತೆತ್ತರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಲಕ್ಷಾಂತರ ಜನ ಕಾರ್ಯಕರ್ತರು ಜೈಲು ಸೇರಿದ್ದರು. ದೇಶಕ್ಕಾಗಿ ಕುಟುಂಬ, ಆಸ್ತಿ ಪಾಸ್ತಿ ಬಿಟ್ಟು ದುಡಿದಿದ್ದಾರೆ. ಅಂತವರಿಂದ ಬಿಜೆಪಿ ಪಕ್ಷ ಆಗಿದೆ. ಆದರೆ, ಈಗ ಈ ರೀತಿಯ ಜಗಳದಿಂದ ಕಾರ್ಯಕರ್ತರ ಮನಸ್ಸಿಗೆ ನೋವಾಗುತ್ತಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





