Breaking News

ಕೊರಟಗೆರೆ: ರೈತರಿಂದ 26 ರೂ.ಗೆ 1 ಲೀ. ಹಾಲು ಖರೀದಿಸಿ ಗ್ರಾಹಕರಿಗೆ 44 ರೂ.ಗೆ ಮಾರಾಟ

ಕೊರಟಗೆರೆ: ನಮ್ಮಿಂದ 1ಲೀ ಹಾಲಿಗೆ 26ರೂನಂತೆ ಖರೀದಿಸಿ ನಮ್ಮ ಮುಂದೆಯೇ ನಮ್ಮೂರಿನ ಗ್ರಾಹಕರಿಗೆ 1ಲೀ ಹಾಲಿಗೆ 44ರೂಗೆ ಮಾರಾಟ ಮಾಡ್ತಾರೇ. ನಾವು ಪ್ರಶ್ನೆ ಮಾಡಿದ್ರೇ ನಿಮ್ಮ ಹಾಲಿನಲ್ಲಿ ಡಿಗ್ರಿ ಬರುತ್ತಿಲ್ಲ ಪ್ಯಾಟ್ ಕಡಿಮೆ ಇದೆ ನಿಮ್ಮ ಹಾಲು ಬೇಡ ಅಂತಾರೇ. ಡೈರಿ ಕಾರ್ಯದರ್ಶಿ ಸ್ವಾರ್ಥದಿಂದ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ನಮಗೇ ಸೀಗುತ್ತಿಲ್ಲ ಎಂದು ಆರೋಪಿಸಿ ರೈತರು ಕಿಡಿಕಾರಿದ ಘಟನೆ ನಡೆದಿದೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ನಾಗರಾಜು ವಿರುದ್ದ 150ಕ್ಕೂ ಅಧಿಕ ಹಾಲು ಉತ್ಪಾದಕ ರೈತರು ಹಾಲು ಹಾಕುವುದನ್ನೇ ನಿಲ್ಲಿಸಿ ಡೈರಿಗೆ ಮುತ್ತಿಗೆಹಾಕಿ ಪ್ರತಿಭಟನೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿ ರೈತರಿಗೆ ಅನ್ಯಾಯ ಆಗದಂತೆ ಮೇಲಾಧಿಕಾರಿಗಳು ಕ್ರಮ ವಹಿಸಬೇಕಿದೆ ಎಂದು ಮನವಿ ಮಾಡಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಆದೇಶದಂತೆ ಅರಸಾಪುರದಲ್ಲಿ ಕಳೆದ 8ವರ್ಷದ ಹಿಂದೆ ಪ್ರಾರಂಭವಾದ ಡೈರಿಯು ಈಗ ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ. ಪರಿಶೀಲನೆ ನಡೆಸಬೇಕಾದ ಮೇಲ್ವಿಚಾರಕಿ ಮತ್ತು ಸೂಪರ್‍ವೈಸರ್ ಕೇಂದ್ರಸ್ಥಾನದಲ್ಲೇ ವಾಸವಿಲ್ಲ. ಉಸ್ತುವಾರಿ ವಹಿಸಬೇಕಾದ ನಿರ್ದೇಶಕರಿಗೆ ಇನ್ನೂ ಅಧಿಕಾರ ಸಿಕ್ಕಿಲ್ಲ. ಹಾಲಿನ ಜೊತೆ ಚೆಲ್ಲಾಟ ಆಡೋದು ಎಷ್ಟು ಸರಿ ಎಂಬುದು ಸ್ಥಳೀಯರ ಆಕ್ರೋಶವಾಗಿದೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *