Breaking News

ವಿದ್ಯುತ್ ಇಲ್ಲದ ಸಮಯದಲ್ಲಿಯೂ ಮಿನಿ ವಿಧಾನಸೌಧದ ಎರಡು ಕೇಂದ್ರಗಳಲ್ಲಿ ಆರ್.ಟಿ.ಸಿ ವಿತರಣೆಗೆ ಕ್ರಮ. ತಹಶೀಲ್ದಾರ್ ಶಿವಮೂರ್ತಿ

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಎರಡು ಪ್ರತ್ಯೇಕ ಕೌಂಟರ್ ಗಳನ್ನು ಸ್ಥಾಪಿಸಿ ಆರ್.ಟಿ.ಸಿ ಪಹಣಿಯನ್ನು ವಿತರಿಸಲು ಕ್ರಮಕೈಗೊಂಡು ರೈತಬಾಂಧವರಿಗೆ ಅನುಕೂಲ ಕಲ್ಪಿಸಿಕೊಡಲಾಗಿದೆ ಎಂದು ತಹಶೀಲ್ದಾರ್ ಎಂ. ಶಿವಮೂರ್ತಿ ತಿಳಿಸಿದ್ದಾರೆ.ವಿದ್ಯುಚ್ಛಕ್ತಿ ಇಲ್ಲದ ಸಮಯದಲ್ಲಿಯೂ ಆರ್.ಟಿ.ಸಿ ವಿತರಣೆಗೆ ತಾಲ್ಲೂಕು ಆಡಳಿತವು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು ಎರಡೂ ಆರ್.ಟಿ.ಸಿ ವಿತರಣಾ ಕೇಂದ್ರಗಳಿಗೆ ಯುಪಿಎಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದ್ದರಿಂದ ರೈತ ಬಾಂಧವರು ಸರ್ಕಾರಿ ಕಛೇರಿ ಅವಧಿಯ ಸಮಯದಲ್ಲಿ ಬಂದು ಆರ್.ಟಿ.ಸಿ ಪಹಣಿಯನ್ನು ಪಡೆದುಕೊಳ್ಳಬಹುದು.ಆಧಾರ್ ಕೇಂದ್ರಗಳಲ್ಲಿಯೂ ಕಟ್ಟುನಿಟ್ಟಿನ ಕ್ರಮಕೈಗೊಂಡು ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಶಿವಮೂರ್ತಿ ವಿವರಿಸಿದರು…

Share News

About admin

Check Also

ವೆನ್ನಿಲಾ ಕೊಲೆ ಪ್ರಕರಣ. ಕಾಡುಗೋಡಿ ಠಾಣೆಯ ಇನ್ಸ್‌ಪೆಕ್ಟರ್ ಸೇರಿ ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್..

ಬೆಂಗಳೂರು: ವೆನ್ನಿಲಾ ಕೊಲೆ ಪ್ರಕರಣ – ಕಾಡುಗೋಡಿ ಠಾಣೆಯ ಇನ್ಸ್‌ಪೆಕ್ಟರ್ ಸೇರಿ ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್ ಬೆಂಗಳೂರು ನಗರದ …

Leave a Reply

Your email address will not be published. Required fields are marked *