ಬೆಂಗಳೂರು: ರಾಜ್ಯ ಸರ್ಕಾರದಿಂದ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಎನ್ ಪಿ ಎಸ್ ನೌಕರರ ಕುಟುಂಬ ಪಿಂಚಣಿ ಪ್ರಸ್ತಾವನೆಯೊಂದಿಗೆ ಪರಿಶೀಲನಾ ಪಟ್ಟಿಯನ್ನು ಸಲ್ಲಿಸಲು ಮಹತ್ವದ ಆದೇಶ ಹೊರಡಿಸಿದೆ.
ಈ ಸಂಬಂಧ ಖಜಾನೆ ಆಯುಕ್ತಾಲಯದ ಆಯುಕ್ತರು ರಾಜ್ಯದ ಎಲ್ಲಾ ಖಜಾನೆಯ ಪ್ರಭಾರಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಅದರಲ್ಲಿ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಎನ್.ಪಿ.ಎಸ್. ನೌಕರರ ಕುಟುಂಬ ಪಿಂಚಣಿ ಪರಿವರ್ತನೆಯ ಪ್ರಸ್ತಾವನೆಗಳನ್ನು ರಾಜ್ಯದ ಖಜಾನೆಗಳಿಂದ ಎನ್.ಪಿ.ಎಸ್. ಘಟಕಕ್ಕೆ ಸಲ್ಲಿಸುತ್ತಿರುವುದು ಸರಿಯಷ್ಟೇ, ಸದರಿ ಪುಸ್ತಾವನೆಗಳಲ್ಲಿ ಡಿ.ಡಿ.ಓ.ರವರು ಅಪೂರ್ಣ ಮಾಹಿತಿ ಹಾಗೂ ಅಪೂರ್ಣ ದಾಖಲೆಗಳನ್ನು ನೀಡುತ್ತಿದ್ದು, ಅವುಗಳನ್ನು ಗಮನಿಸದ ಖಜಾನಾಧಿಕಾರಿಗಳು ನೇರವಾಗಿ ಎನ್.ಪಿ.ಎಸ್. ಘಟಕಕ್ಕೆ ಪುಸ್ತಾವನಗಳನ್ನು ಸಲ್ಲಿಸುತ್ತಿರುವುದು ಕಂಡುಬರುತ್ತಿದೆ. ಇದರಿಂದಾಗಿ ಎನ್.ಪಿ.ಎಸ್. ಘಟಕದಲ್ಲಿ ಪ್ರಸ್ತಾವನೆಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಸಾಧ್ಯವಾಗದೇ, ಪೂರಕ ದಾಖಲೆಗಳ ಕೊರತೆಯಿಂದ ಪುಸ್ತಾವನೆಗಳನ್ನು ಹಿಂದಿರುಗಿಸಲಾಗುತ್ತಿದೆ ಎಂದಿದೆ.
ಈ ಸಂಬಂಧ ಪತ್ರದೊಂದಿಗೆ ಲಗತ್ತಿಸಲಾಗಿರುವ ಹೊಸ ಪರಿಶೀಲನಾ ಪಟ್ಟಿ ಯಂತ್ರ ದಾಖಲೆಗಳನ್ನು ಸಿದ್ಧಪಡಿಸಿ, ದೃಢೀಕರಿಸಿ ಕಡ್ಡಾಯವಾಗಿ ಸಲ್ಲಿಸುವಂತೆ ತಿಳಿಸಿ ಪರಿಶೀಲನಾ ಪಟ್ಟಿ ಯನ್ನು ಡಿಡಿಓಗಳಿಗೆ ನೀಡುವುದು ಹಾಗೂ ಸದರಿ ಪರಿಶೀಲನಾ ಪಟ್ಟಿಯನ್ವಯ ಡಿಡಿಓ ರವರಿಂದ ಪುಸ್ತಾವನ ಸ್ವೀಕರಿಸಿದ ನಂತರ ಖಜಾನಾಧಿಕಾರಿಗಳು ಪರಿಶೀಲಿಸಿ ತಮ್ಮ ಹಂತದಲ್ಲಿಯೇ ತಪ್ಪುಗಳನ್ನು ಸರಿಪಡಿಸಿ ಪುಸ್ತಾವನೆಗಳನ್ನು ಎನ್.ಪಿ.ಎಸ್. ಘಟಕಕ್ಕೆ ಸಲ್ಲಿಸುವಂತೆ ಸೂಚಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





