Breaking News

ಅನಾಮಧೇಯ ಅರ್ಜಿಗಳ ವಿಚಾರಣೆ ಕಡಿತ: ಪೂರಕ ದಾಖಲೆ ನೀಡಿದ ಅರ್ಜಿಗಳನ್ನು ಮಾತ್ರ ತನಿಖೆಗೆ ಪರಿಗಣಿಸಲು ಆದೇಶ..

ಹುಬ್ಬಳ್ಳಿ: ಸರ್ಕಾರಿ ಅಧಿಕಾರಿಗಳು ಅಥವಾ ನೌಕರರು ದೈನಂದಿನ ಕೆಲಸ ಕಾರ್ಯಗಳನ್ನು ನಿರ್ಭೀತರಾಗಿ ಕೆಲಸ ನಿರ್ವಹಿಸಲು ತೊಂದರೆಯಾಗುತ್ತಿದ್ದು, ಅನಾಮಧೇಯ ಅರ್ಜಿಗಳನ್ನು ವಿಚಾರಣೆಗೆ ಒಳಪಡಿಸದೇ ಕಡಿತಗೊಳಿಸಿ ಪೂರ್ಣ ವಿಳಾಸ ಸಹಿತವಿರುವ ದೂರುಗಳನ್ನು ಮಾತ್ರ ವಿಚಾರಣೆಗೆ ಪರಿಗಣಿಸುವಂತೆ ಸರ್ಕಾರದ

ಅನೇಕರು ನಕಲಿ ಹೆಸರು, ವಿಳಾಸವನ್ನು ಬಳಸಿಕೊಂಡು ರಾಜ್ಯ ಸರ್ಕಾರಿ ಅಧಿಕಾರಿಗಳು, ನೌಕರರ ವಿರುದ್ಧ ದೂರುಗಳನ್ನು ನೀಡಿ ಅನಗತ್ಯವಾಗಿ ನೌಕರರನ್ನು ತನಿಖೆಗೆ ಒಳಪಡಿಸುವಂತೆ ಮಾಡುತ್ತಿರುವುದನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ಇಂತಹ ಪ್ರಸಂಗಗಳನ್ನು ತಡೆಹಿಡಿಯಲು ಅಗತ್ಯ ಸೂಚನೆ ಹೊರಡಿಸುವಂತೆ ಮುಖ್ಯಮಂತ್ರಿಗಳು ಆದೇಶಿಸಿರುತ್ತಾರೆ. ಪೂರ್ಣ ವಿಳಾಸವಿರುವ ದೂರುಗಳನ್ನು ದೂರು ನೀಡಿರುವ ವ್ಯಕ್ತಿಯ ಹೆಸರು ಮತ್ತು ವಿಳಾಸ ಖಚಿತಪಡಿಸಿಕೊಂಡು ಅಗತ್ಯ ಪೂರಕ ದಾಖಲೆ ನೀಡಿದ ನಂತರ ಆರೋಪ ಕಂಡುಬಂದಲ್ಲಿ ಅಂತಹ ಅರ್ಜಿಗಳನ್ನು ಮಾತ್ರ ಪ್ರಾಥಮಿಕ ತನಿಖೆಗೆ ಪರಿಗಣಿಸಲು ಆದೇಶಿಸಲಾಗಿದೆ.

ಇನ್ಸ್‌ಪೆಕ್ಟರ್ ಸುರೇಶ ಯಳ್ಳುರ ಮೇಲೆ ಆರೋಪ ಕೇಳಿ ಬಂದಿದ್ದು, ತನಿಖೆ ಆಗಿರುತ್ತದೆ. ಇನ್ನು ಪೊಲೀಸ್ ಇಲಾಖೆಗೆ ಕಳಂಕ ತರುವ ಕೆಲಸ ಮಾಡಿರುತ್ತಾರೆ. ಎಸಿಪಿ ಕಚೇರಿಗೆ ಅರ್ಜಿಯು ಬಂದಿರುತ್ತೆ ಈ ಅರ್ಜಿಯು ಮಿಡೀಯಾಗೆ ಹೇಗೆ ಸಿಕ್ಕಿತು, ಎಸಿಪಿ ಅಧಿಕಾರಿಗಳು ಹಾಗೂ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ತನಿಖೆ ಆಗಬೇಕು. ಅಧಿಕಾರಿಗಳು, ಮಹಿಳಾ ಸಿಬ್ಬಂದಿಗಳು, ನೌಕರರು ಕೆಟ್ಟವರಲ್ಲ. ಯಾರೋ ದುರುದ್ದೇಶಕ್ಕಾಗಿ ಮಾಡಿರುತ್ತಾರೆ.

ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯ ಸಿಬ್ಬಂದಿಗಳ ವಿಚಾರಣೆ ಮಾಡುತ್ತಾರಾ ಪೊಲೀಸ್ ಆಯುಕ್ತರು, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತಾರಾ ಅನ್ನೊದನ್ನ ಕಾದುನೋಡಬೇಕಾಗಿದೆ.

ಸುಪಾರಿ ಕೊಟ್ಟ ಈ ಪೊಲೀಸಪ್ಪ ಯಾರು ಗೊತ್ತಾ..
ಮುಂದಿನ ಭಾಗದಲ್ಲಿ ನಿರೀಕ್ಷಿಸಿ…

Share News

About Shaikh BigTv

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *