ಬೆಂಗಳೂರು: ಸಬ್ಸಿಡಿ ಯೋಜನೆ ದೇಶದ ಬೆಳವಣಿಗೆಗೆ ಮಾರಕವಾಗಲಿದೆ. ಜನರು ಸ್ವತಃ ದುಡಿದು ತಿನ್ನುವ ವ್ಯವಸ್ಥೆ ಜಾರಿ ಮಾಡದಿದ್ದರೆ ದೇಶ ಆರ್ಥಿಕವಾಗಿ ಸದೃಢವಾಗದು. ಸರ್ಕಾರವು ಬಡವರ ಏಳಿಗೆಗಾಗಿ ಸದುದ್ದೇಶದಿಂದ ಸಹಾಯ ಧನದ ಯೋಜನೆಗಳನ್ನು ಪರಿಚಯಿಸಿದೆ.
ಆದರೆ ಅವುಗಳ ದುರ್ಬಳಕೆ ಪ್ರಮಾಣ ಹೆಚ್ಚಾಗಿದೆ ಎಂದು ಹೈಕೋರ್ಟ್ ಮೌಖಿಕವಾಗಿ ಬೇಸರ ವ್ಯಕ್ತಪಡಿಸಿದೆ. ಬಿಪಿಎಲ್ ಕಾರ್ಡುದಾರರಿಗೆ ವಿತರಿಸಬೇಕಿದ್ದ ನೀಲಿ ಸೀಮೆ ಎಣ್ಣೆಯನ್ನು ಅಕ್ರಮ ವಾಗಿ ಖಾಸಗಿ ವ್ಯಕ್ತಿಗಳಿಗೆ ಮಾರಲಾಗಿತ್ತು. ತಮ್ಮನ್ನು ದೋಷಿ ಎಂದು ಘೋಷಿಸಿ 5ತಿಂಗಳ ಜೈಲು ಶಿಕ್ಷೆ ವಿಧಿಸಿದ್ದ ಅಧೀನ ನ್ಯಾಯಾಲಯ ಆದೇಶ ರದ್ದು ಕೋರಿ ಮೈಸೂರಿನ ಸಯ್ಯದ್ ಗೌಸ್ ಖಾನ್ (62) ಅದಿಲ್ ಖಾನ್ ಹೈಕೋರ್ಟ್‌ಗೆ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ವೇಳೆ ಆರೋಪಿಗಳ ಕೃತ್ಯದ ಬಗ್ಗೆ ತೀವ್ರವಾಗಿ ಆಕ್ಷೇಪಿಸಿದ ನ್ಯಾಯಮೂರ್ತಿ ವಿ. ಶ್ರೀಷಾನಂದ, ಬಡವರ ಅನು ಕೂಲಕ್ಕೆ ಸರ್ಕಾರ ನೀಡುವ ಸಬ್ಸಿಡಿ ಯೋಜನೆಗಳು ದುರುಪಯೋಗವಾಗುತ್ತಿದೆ. ಇದರಿಂದ ಇಂದು ದೇಶ ಎಂತಹ ಸ್ಥಿತಿಗೆ ತಲುಪಿದೆ ಎಂದು ಯೋಚಿ ಸಿದರೆ ನೋವು ಉಂಟಾಗುತ್ತದೆ. ಸರ್ಕಾರವು ಬಡವರಿಗೆ ನೆರವಾಗಲು ಸಬ್ಸಿಡಿ ಯೋಜನೆ ರೂಪಿಸಿದರೆ ಸಾಲದು; ಅವುಗಳ ದುರು ಪಯೋಗವನ್ನು ಸಹ ತಡೆಯಬೇಕು ಎಂದರು. ಅಲ್ಲದೆ, ಅರ್ಜಿದಾರರಿಗೆ ಕ್ಷಮಾದಾನ ನೀಡಬೇ ಕೆಂಬ ಅವರ ಪರ ವಕೀಲರ ಮನವಿಯನ್ನು ಮೊದಲಿಗೆ ಒಪ್ಪದ ನ್ಯಾಯಮೂರ್ತಿಗಳು, ಇದು ಸಾರ್ವಜನಿಕ ಅಗತ್ಯ ವಸ್ತುಗಳ ನಿಯಮಗಳಡಿ ದಾಖಲಾಗಿರುವ ಪ್ರಕರಣ, ಆರೋಪಿಗಳನ್ನು ಸುಮ್ಮನೆ ಬಿಡಲಾಗದು. ಒಂದು ವೇಳೆ ಸಮ್ಮನೆ ಬಿಟ್ಟರೆ ಈ ಆರೋಪಿಗಳು ಸೇರಿದಂತೆ ಇದೇ ಅಕ್ರಮದಲ್ಲಿ ಪಾಲ್ಗೊಳ್ಳುವ ಇತರರು ಪಾಠ ಕಲಿಯುವುದಿಲ್ಲ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

