Breaking News

ಅಂಗವಿಕಲ ಯುವತಿ ಮೇಲೆ ರೇಪ್‌ ಯತ್ನ: ಆರೋಪಿಗೆ ಗೂಸಾ

ಮನೆಯಲ್ಲಿ ಒಂಟಿಯಾಗಿದ್ದ ಅಂಗವಿಕಲ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನನ್ನು ಸ್ಥಳೀಯರೇ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿರುವ ಘಟನೆ ಆಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಲಕ್ಷ್ಮಣರಾವ್‌ ನಗರ ನಿವಾಸಿ ವಿಘ್ನೇಶ್ ಅಲಿಯಾಸ್‌ ದಾಡು (26) ಬಂಧಿತ ಆರೋಪಿ.ಈತ ನ.10ರಂದು ಲಕ್ಷ್ಮಣ್‌ರಾವ್‌ ನಗರ ನಿವಾಸಿ 20 ವರ್ಷದ ಅಂಗವಿಕಲ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಪೋಷಕರ ಜತೆ ವಾಸವಾಗಿರುವ ಸಂತ್ರಸ್ತೆಗೆ ಮಾತು ಬರುವುದಿಲ್ಲ. ಜತೆಗೆ ಕಾಲು ಸ್ವಾಧೀನವಿಲ್ಲ. ಯುವತಿ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ನ.10ರಂದು ಸಂಬಂಧಿಕರ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಆಗ ಮನೆಯಲ್ಲಿ ಯುವತಿ ಒಬ್ಬಳೆ ಇದ್ದಳು. ಈ ವೇಳೆ ಮದ್ಯದ ಅಮಲಿನಲ್ಲಿ ಮನೆಗೆ ಬಂದ ಆರೋಪಿ, ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಕೆಲ ಹೊತ್ತಿನ ಬಳಿಕ ಮಗಳನ್ನು ನೋಡಲು ಆಕೆಯ ತಾಯಿ ಮನೆಗೆ ಬಂದಾಗ ಒಳಗಿನಿಂದ ಚಿಲಕ ಹಾಕಲಾಗಿತ್ತು. ಅದರಿಂದ ಆತಂಕಗೊಂಡ ತಾಯಿ, ಕಾಲಿನಿಂದ ಜೋರಾಗಿ ಬಾಗಿಲ ಒದ್ದು ಒಳಗೆ ಹೋಗಿದ್ದಾರೆ. ಆಗ ಆರೋಪಿ ಯುವತಿಯನ್ನು ವಿವಸ್ತ್ರಗೊಳಿಸಲು ಯತ್ನಿಸುತ್ತಿದ್ದ. ಅದರಿಂದ ಗಾಬರಿಗೊಂಡ ತಾಯಿ ಜೋರಾಗಿ ಕೂಗಿಕೊಂಡಿದ್ದು, ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಕೂಗಾಟದಿಂದ ಸ್ಥಳೀಯರು ಆರೋಪಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *